ಫೇಸ್ಬುಕ್ ನ ಸಾರ್ವಜನಿಕ ನೀತಿಯ ಮುಖ್ಯಸ್ಥರಾಗಿ ಮಾಜಿ ಐಎಎಸ್ ಅಧಿಕಾರಿ ರಾಜೀವ್ ಅಗರ್ವಾಲ್ ನೇಮಕ

Update: 2021-09-20 17:16 GMT

ಕೋಲ್ಕತಾ, ಸೆ. 20: ತನ್ನ ಸಾರ್ವಜನಿಕ ನೀತಿಯ ನಿರ್ದೇಶಕರನ್ನಾಗಿ ಮಾಜಿ ಐಎಎಸ್ ಅಧಿಕಾರಿ ಹಾಗೂ ಉಬರ್ ನ ಮಾಜಿ ಕಾರ್ಯನಿರ್ವಹಣಾಧಿಕಾರಿ ರಾಜೀವ್ ಅಗರ್ವಾಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪೇಸ್ಬುಕ್ ಸೋಮವಾರ ಹೇಳಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ರಾಜೀನಾಮೆ ನೀಡಿದ ಅಂಕಿತ್ ದಾಸ್ ಅವರ ಉತ್ತರಾಧಿಕಾರಿಯಾಗಿ ರಾಜೀವ್ ಅಗರ್ವಾಲ್ ನೇಮಕರಾಗಿದ್ದಾರೆ. 

ರಾಜೀವ್ ಅಗರ್ವಾಲ್ ಅವರು ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ವಹಣಾಧಿಕಾರಿ ಅಜಿತ್ ಮೋಹನ್ ಅವರಿಗೆ ವರದಿ ಮಾಡಲಿದ್ದಾರೆ. ಅಲ್ಲದೆ, ಭಾರತದ ನಾಯಕತ್ವ ತಂಡದ ಭಾಗವಾಗಲಿದ್ದಾರೆ ಎಂದು ಅದು ಹೇಳಿದೆ. ಅಗರ್ವಾಲ್ ಅವರು 26 ವರ್ಷ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಉತ್ತರ ಪ್ರದೇಶದ 9 ಜಿಲ್ಲೆಗಳಲ್ಲಿ ದಂಡಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಫೇಸ್ಬುಕ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News