ಮಂಗಳೂರು: ಟೀಂ ಬಿ-ಹ್ಯೂಮನ್ ನಿಂದ ಕೊರೋನ ಲಸಿಕೆ ಶಿಬಿರ

Update: 2021-09-21 07:44 GMT

ಮಂಗಳೂರು, ಸೆ.21: ಟೀಮ್ ಬಿ-ಹ್ಯೂಮನ್(ರಿ) ಮಂಗಳೂರು ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಟೀಂ ಮೇಕ್-ಎ-ಚೇಂಜ್ ಇದರ ಸಹಭಾಗಿತ್ವದಲ್ಲಿ ಉಚಿತ ಕೋರೋನ ಲಸಿಕಾ ಶಿಬಿರವು ಬಲ್ಮಠದ ಬಿಷಪ್ ಜತ್ತನ ಸಭಾಂಗಣದಲ್ಲಿ ಸೆ.18ರಂದು ನಡೆಯಿತು. ಇದು ಟೀಂ ಬಿ-ಹ್ಯೂಮನ್ ತಂಡ ಆಯೋಜಿಸಿದ ಆರನೇ ಲಸಿಕಾ ಶಿಬಿರವಾಗಿತ್ತು.

ಅತ್ಯಂತ ವ್ಯವಸ್ಥಿತವಾಗಿ ನಡೆದ ಶಿಬಿರದಲ್ಲಿ ಹೋಟೆಲ್ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ವಿಶೇಷ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 272 ಮಂದಿ ಲಸಿಕೆ ಪಡೆದರು. 8 ವಿಕಲಚೇತನ ಹಿರಿಯ ನಾಗರಿಕರ ಮನವಿಯ ಮೇರೆಗೆ ಅವರ ಮನೆಗಳಿಗೆ ಶಿಬಿರದ ಸ್ವಯಂಸೇವಕರು ತೆರಳಿ ಲಸಿಕೆ ನೀಡಿದರು.

ಟೀಂ ಬಿ-ಹ್ಯೂಮನ್ ಇದರ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ಮಾತನಾಡಿ, ಶಿಬಿರ ಆಯೋಜಿಸಲು ಸಹಕರಿಸಿದ  ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಸ್ಥಳೀಯ ಕಾರ್ಪೊರೇಟರ್ ಗಳಾದ ಸಂದೀಪ್ ಗರೋಡಿ, ನವೀನ್ ಡಿಸೋಜ, ಬಿಷಪ್ ಜತ್ತನ ಸಭಾಂಗಣದ ಕಾರ್ಯನಿರ್ವಾಹಕ ಡಾ.ವಾಟ್ಸನ್ ರಿಗೆ ಧನ್ಯವಾದ ಸಲ್ಲಿಸಿದರು.

ಟೀಂ ಬಿ-ಹ್ಯೂಮನ್ ತಂಡದ ಸ್ವಯಂಸೇವಕರು, ಟೀಂ ಮೇಕ್-ಎ-ಚೇಂಜ್ ನ ಸದಸ್ಯರು ಮತ್ತು ರೆಡ್ ಕ್ರಾಸ್ ನ ಪ್ರವೀಣ್ ಮತ್ತವರ ತಂಡ ಸಹಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News