ಮಸೀದಿಗಳಲ್ಲಿ ಮಾದಕ ವ್ಯಸನಮುಕ್ತ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಮಸ್ಜಿದ್ ಒನ್ ಮೂಮೆಂಟ್ ಮನವಿ

Update: 2021-09-21 08:22 GMT

ಮಂಗಳೂರು; ಸೆ 21: ಮಾದಕ ವ್ಯಸನಕ್ಕೆ ಬಹಳಷ್ಟು ಯುವಕ-ಯುವತಿಯರು ಬಲಿಯಾಗಿ ತಮ್ಮ ಜೀವನವನ್ನೇ ನಾಶಪಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಇದರಿಂದಾಗಿ ಬಹಳಷ್ಟು ಅನೈತಿಕ ಮತ್ತು ಅಪರಾಧ ಪ್ರವೃತ್ತಿಗಳು ಬೆಳೆಯುತ್ತಿವೆ. ಆದ್ದರಿಂದ ಈ ಪಿಡುಗಿಗೆ ಯುವ ಸಮೂಹ ಬಲಿಯಾಗದಂತೆ ತಡೆಯುವ ಉದ್ದೇಶದಿಂದ ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್ ಮೆಂಟ್ ಕೌನ್ಸಿಲ್- ಮಸ್ಜಿದ್ ಒನ್ ಮೂಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಮಸೀದಿಗಳಲ್ಲಿ ಮಾದಕ ವ್ಯಸನಮುಕ್ತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ ಎಂದು ಸಂಘಟನೆಯ ದ.ಕ. ಜಿಲ್ಲಾ ಅಧ್ಯಕ್ಷ ಹಾಜಿ ಅಹ್ಮದ್ ಮುಹಿಯುದ್ದೀನ್ ವರ್ಲ್ಡ್ ವೈಡ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮುಕ್ಕ ಜುಮಾ ಮಸೀದಿಯಲ್ಲಿ ಈ ಅಭಿಯಾನಕ್ಕೆ ಮಸೀದಿಯವರ ಸಹಕಾರದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಈ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿ ಯುವ ಸಮೂಹಕ್ಕೆ ತಿಳುವಳಿಕೆ ನೀಡುವಂತೆ ಅವರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

ಮಸೀದಿಯಲ್ಲಿ ಕಾರ್ಯಕ್ರಮ ನಡೆಸಲು ಅಗತ್ಯ ಮಾರ್ಗದರ್ಶನ ಬೇಕಿದ್ದರೆ ಮೊ.ಸಂ.: 9606622638 ಅನ್ನು ಸಂಪರ್ಕಿಸಬಹುದು ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News