ಐಎಸ್ಎಫ್ ಜುಬೈಲ್ ಅಧ್ಯಕ್ಷರಾಗಿ ನಝೀರ್ ತುಂಬೆ ಆಯ್ಕೆ

Update: 2021-09-21 11:48 GMT

ಜುಬೈಲ್: ಇಂಡಿಯನ್ ಸೋಶಿಯಲ್ ಫೋರಂ ಜುಬೈಲ್ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ದಮಾಮ್ ನ  ಇಸ್ತಿರಾದಲ್ಲಿ ನಡೆಯಿತು.

ಈ ಸಂದರ್ಭ ಕಳೆದ ಅವಧಿಯಲ್ಲಿ ಮಾಡಿದಂತಹ ಕೆಲಸ-ಕಾರ್ಯಗಳ ಬಗ್ಗೆ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕುಂಪಲ ವಿವರಿಸಿದರು. ನಂತರ ನಡೆದ ಚುನಾವಣೆಯಲ್ಲಿ ಬರುವ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಮುಹಮ್ಮದ್ ನಝೀರ್ ತುಂಬೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕುಂಪಲ ಆಯ್ಕೆಯಾದರು. ಉಪಾಧ್ಯಕ್ಷರಾಗಿ  ನದೀಮುಲ್ಲಾ ಶರೀಫ್ ಮೈಸೂರು ಹಾಗು ಅಶ್ರಫ್ ಉಳ್ಳಾಲ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಅನೀಸ್ ಹಳೆಯಂಗಡಿ, ಸೈಫುಲ್ಲಾ ತೋಡಾರ್, ಸಲೀಂ ಉಡುಪಿ ಇವರನ್ನು ಆಯ್ಕೆ ಮಾಡಲಾಯಿತು. ಅಬೂಬಕರ್ ಸಿದ್ದೀಕ್, ರಫೀಕ್ ಕೇಪು, ಹಸನ್ ಕಿನ್ನಿಗೋಳಿ, ಶಮೀರ್ ಮೂಳೂರು, ಸಾಮತ್ ಕುಳಾಯಿ, ಇಮ್ತಿಯಾಝ್ ಬಜ್ಪೆ ಅವರನ್ನು ರಾಜ್ಯ ಸಮಿತಿಯ ಸದಸ್ಯರಾಗಿ ನೇಮಿಸಲಾಯಿತು.

Writer - ವರದಿ : ಸಂಶುದ್ದೀನ್ ಐ.ಜಿ.

contributor

Editor - ವರದಿ : ಸಂಶುದ್ದೀನ್ ಐ.ಜಿ.

contributor

Similar News