ಎಪಿಐ ಕರ್ನಾಟಕದ ವಾರ್ಷಿಕ ಸಮ್ಮೇಳನ ‘ಕಾಪಿಕಾನ್-2021’

Update: 2021-09-21 13:09 GMT

ಮಣಿಪಾಲ, ಸೆ.21: ಎಪಿಐ ಉಡುಪಿ- ಮಣಿಪಾಲ ಚಾಪ್ಟರ್ ಹಾಗೂ ಮಾಹೆಯ ಕೆಎಂಸಿ ಮಣಿಪಾಲ ವೈದ್ಯಕೀಯ ವಿಭಾಗದ ಸಂಯುಕ್ತ ಆಶ್ರಯ ದಲ್ಲಿ ಎಪಿಐ ಕರ್ನಾಟಕ ಚಾಪ್ಟರ್‌ನ ವಾರ್ಷಿಕ ಸಮ್ಮೇಳನ ‘ಕಾಪಿಕಾನ್ 2020-21’ ಮಣಿಪಾಲದ ಹೊಟೇಲ್ ಮಣಿಪಾಲ ಇನ್‌ನಲ್ಲಿ ನಡೆಯಿತು.
ಉದಯೋನ್ಮುಖ ಸವಾಲುಗಳಿಗೆ ವೈದ್ಯರನ್ನು ಸಬಲೀಕರಣಗೊಳಿಸುವ ಧ್ಯೇಯವಾಕ್ಯದೊಂದಿಗೆ ನಡೆದ ಸಮ್ಮೇಳನವನ್ನು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟಿಸಿದರು.

ಮಣಿಪಾಲದ ಮಾಹೆ ವಿವಿ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ.ವೆಂಕಟೇಶ್, ಸಹ ಕುಲಪತಿ (ಆರೋಗ್ಯ ವಿಜ್ಞಾನ ) ಡಾ.ಪಿ.ಎಲ್.ಎನ್. ಜಿ. ರಾವ್, ಕೆಎಂಸಿಯ ಡೀನ್ ಡಾ. ಶರತ್ ಕೆ. ರಾವ್ ಗೌರವ ಅಥಿತಿಗಳಾಗಿ ಪಾಲ್ಗೊಂಡಿದ್ದರು.

ಕರ್ನಾಟಕ ಎಪಿಐ ಚಾಪ್ಟರ್‌ನ ಮುಖ್ಯಸ್ಥರಾದ ಡಾ.ವಿ.ಎ.ಕೋಥಿವಾಳೆ, ಕಾಪಿಕಾನ್ 2020-21ರ ವಿಜ್ಞಾನ ಸಮಿತಿಯ ಮುಖ್ಯಸ್ಥ ಡಾ.ಎಚ್.ಕೆ. ರಾಜಶೇಖರ್, ಕರ್ನಾಟಕ ಎಪಿಐ ಚಾಪ್ಟರ್ ಕಾರ್ಯದರ್ಶಿ ಡಾ.ಎಂ ನಾರಾಯಣ ಸ್ವಾಮಿ, ಕಾಪಿಕಾನ್ 2020-21ರ ಸಂಘಟನಾ ಮುಖ್ಯಸ್ಥ ಡಾ. ಸುಧಾ ವಿದ್ಯಾಸಾಗರ್, ಸಂಘಟನಾ ಕಾರ್ಯದರ್ಶಿ ಡಾ. ಶಿವಶಂಕರ್ ಕೆ.ಎನ್., ಜೊತೆ ಕಾರ್ಯದರ್ಶಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ರವಿರಾಜ್ ಆಚಾರ್ಯ, ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ .ಚಂದ್ರಶೇಖರ್ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News