ಮೆಸೂರು ಸಿಪೆಟ್‌ನಲ್ಲಿ ಉದ್ಯೋಗಾಧಾರಿತ ಡಿಪ್ಲೊಮಾ: ನೇರ ಪ್ರವೇಶಕ್ಕೆ ಅವಧಿ ವಿಸ್ತರಣೆ

Update: 2021-09-21 13:11 GMT

ಉಡುಪಿ, ಸೆ.21: ಮೈಸೂರಿನಲ್ಲಿರುವ ಕೇಂದ್ರಿಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್)ಯ ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ ಸಂಸ್ಥೆ ಭಾರತ ಸರಕಾರದ ರಸಾಯನ, ಪೆಟ್ರೋ ರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು, ದೇಶದ ಪಾಲಿಮರ್/ಪೆಟ್ರೋ ಕೆಮಿಕಲ್ಸ್/ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡುತ್ತಿದೆ.

ಸಂಸ್ಥೆಯ 2021-22ನೇ ಸಾಲಿನ ಡಿಪ್ಲೊಮಾ ಮತ್ತು ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಕೋರ್ಸ್‌ಗೆ ನೇರ ಪ್ರವೇಶ ಪಡೆಯಲು ಕೊನೆಯ ದಿನಾಂಕವನ್ನು ಸೆ.24ರವರೆಗೆ ವಿಸ್ತರಿಸಲಾಗಿದೆ.

ಎಸೆಸೆಲ್ಸಿ, ಪಿಯುಸಿ(ವಿಜ್ಞಾನ), ಐಟಿಐ (ಫಿಟ್ಟರ್, ಟರ್ನರ್, ಮೆಕಾನಿಸ್ಟ್) ಮತ್ತು ಬಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು, ಡಿಪ್ಲೊಮೋ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ (3 ವರ್ಷ), ಡಿಪ್ಲೊಮೋ ಇನ್ ಪ್ಲಾಸ್ಟಿಕ್ ವೌಲ್ಡ್ ಟೆಕ್ನಾಲಜಿ(3 ವರ್ಷ), ಪೋಸ್ಟ್ ಗ್ರಾಜುಯೇಟ್ ಇನ್ ಪ್ಲಾಸ್ಟಿಕ್ ಪ್ರೋಸೆಸಿಂಗ್ ಅಂಡ್ ಟೆಸ್ಟಿಂಗ್ (2 ವರ್ಷ) ಈ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2510618, 9791431827, 9480253024, 9141075968 ಹಾಗೂ ವೆಬ್‌ಸೈಟ್ - ಡಿಡಿಡಿ.್ಚಜಿಛಿಠಿ.ಜಟ.ಜ್ಞಿ-ನ್ನು ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕ ಹಾಗೂ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News