ತೋಟಗಾರಿಕೆಯಲ್ಲಿ ಯಾಂತ್ರೀಕರಣಕ್ಕೆ ಸಹಾಯಧನ

Update: 2021-09-21 13:14 GMT

ಉಡುಪಿ, ಸೆ.21: ಪ್ರಸಕ್ತ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಉಪ ಅಭಿಯಾನ ದಡಿ ಕರ್ನಾಟಕರಾಜ್ಯದಲ್ಲಿ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮ ವನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಇದರನ್ವಯ ಪ.ಜಾತಿ/ಪ.ಪಂಗಡ, ಮಹಿಳಾ ಫಲಾನುಭವಿಗಳು, ಸಣ್ಣ ಮತ್ತು ಅತೀ ಸಣ್ಣ ರೈತ ಫಲಾನುಭವಿಗಳು ತಾವು ಅನುಮೋದಿತ ಸಂಸ್ಥೆಯಿಂದ ಖರೀದಿಸಿದ ಉಪಕರಣ ಹಾಗೂ ಯಂತ್ರಗಳಿಗೆ ಶೇ.50 ಹಾಗೂ ಇತರೇ ವರ್ಗದ ಫಲಾನುಭವಿಗಳು ಶೇ.40 ರಷ್ಟು ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.

ಹಿಂದಿನ ವಷರ್ಗಳಲ್ಲಿ ತೋಟಗಾರಿಕೆ, ಕೃಷಿ, ರೇಷ್ಮೆ, ಪಶುಪಾಲನೆ ಇಲಾಖೆ ಯಿಂದ ಮತ್ತು ಕಾಫಿಬೋರ್ಡ್ ಹಾಗೂ ಇತರೇ ಸಂಸ್ಥೆಗಳಿಂದ ಇದೇ ಯೋಜನೆಯಡಿ ಅಥವಾ ಇನ್ನಿತ್ತರ ರೀತಿಯಾದ ಯೋಜನೆಗಳಡಿ ಸಹಾಯಧನ ಪಡೆದಿದ್ದಲ್ಲಿ ಅಂತಹ ರೈತರು ಮತ್ತೊಮ್ಮೆ ಸಹಾಯಧನ ಪಡೆಯಲು ಅರ್ಹರಾಗಿರುವುದಿಲ್ಲ.

ಹಿಂದಿನ ವಷರ್ಗಳಲ್ಲಿ ತೋಟಗಾರಿಕೆ, ಕೃಷಿ, ರೇಷ್ಮೆ, ಪಶುಪಾಲನೆ ಇಲಾಖೆ ಯಿಂದ ಮತ್ತು ಕಾಫಿಬೋರ್ಡ್ ಹಾಗೂ ಇತರೇ ಸಂಸ್ಥೆಗಳಿಂದ ಇದೇ ಯೋಜನೆಯಡಿ ಅಥವಾ ಇನ್ನಿತ್ತರ ರೀತಿಯಾದ ಯೋಜನೆಗಳಡಿ ಸಹಾಯನಪಡೆದಿದ್ದಲ್ಲಿಅಂತಹರೈತರುಮತ್ತೊಮ್ಮೆಸಹಾಯನ ಪಡೆಯಲು ಅರ್ಹರಾಗಿರುವುದಿಲ್ಲ. ಸಹಾಯಧನ ಪಡೆಯುವ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಉಡುಪಿ 0820-2531950/ 0820-2522837, ಕುಂದಾಪುರ 08254-230813, ಕಾರ್ಕಳ 08258-230288 ಇವರನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News