ಪ್ರವಾಸ ಪ್ರಿಯರಿಗೆ ವೀಡಿಯೋ ಸ್ಪರ್ಧೆ : ಉಡುಪಿ ಜಿಲ್ಲೆಯ ಅಜ್ಞಾತ ಸ್ಥಳಗಳ ಅನ್ವೇಷಣೆ

Update: 2021-09-21 15:43 GMT

ಉಡುಪಿ, ಸೆ.21: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ಸುಸ್ಥಿರ, ಪರಿಸರ ಪೂರಕ, ಗ್ರಾಮೀಣ ಪ್ರವಾಸೋದ್ಯಮ ವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲೆಯ ಹೊಸ ಜಾಗಗಳನ್ನು ಪರಿಚಯಿಸುವ ಸಲುವಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ವೀಡಿಯೋ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದೆ.

ಈಗಾಗಲೇ ಪ್ರಸಿದ್ದವಾಗಿರುವ ಜಾಗವನ್ನು ಹೊರತುಪಡಿಸಿ, ಜನರನ್ನು ಆರ್ಕಷಿಸಬಲ್ಲ, ವಿಶೇಷ ಅನುಭವ ನೀಡಬಲ್ಲ, ಕಲೆ, ಕರಕುಶಲ ಕರ್ಮಿಗಳಿಗೆ ಅವಕಾಶ ಕೊಡಬಲ್ಲ ಹೊಸ ಜಾಗಗಳ ಕುರಿತ 3 ನಿಮಿಷ ಮೀರದ ವಿಡಿಯೋಗಳನ್ನು ಇಮೇಲ್ - ad@udupitourism.com  - ಅಥವಾ ವಾಟ್ಸಾಪ್ ಸಂಖ್ಯೆ: 8660881493 ಗೆ ಸೆಪ್ಟಂಬರ್ 25ರೊಳಗೆ ಕಳುಹಿ ಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5000, 3000, 1000ರೂ. ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News