ಉಡುಪಿ ಜಿಲ್ಲೆಯಲ್ಲಿ ಬುಧವಾರ 50,000 ಡೋಸ್ ಲಸಿಕೆ ಲಭ್ಯ; 18 ವರ್ಷ ಮೇಲಿನ ಎಲ್ಲರಿಗೂ ಲಸಿಕೆ

Update: 2021-09-21 15:45 GMT

ಉಡುಪಿ, ಸೆ.21: ಜಿಲ್ಲೆಯಲ್ಲಿ ಸೆ.22 ಬುಧವಾರ ಕೋವಿಡ್-19 ಲಸಿಕಾ ಮಹಾಮೇಳ ನಡೆಯಲಿದೆ. ಜಿಲ್ಲೆಯ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ನೀಡಲಾಗುತ್ತದೆ. ಎಲ್ಲಾ ಲಸಿಕಾ ಕೇಂದ್ರಗಳಲ್ಲೂ ಬೆಳಗ್ಗೆ 8:00ರಿಂದ ರಾತ್ರಿ 8:00ರವರೆಗೆ ಲಸಿಕೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಾಳೆಗೆ ಒಟ್ಟು 50,000 ಡೋಸ್ ಲಸಿಕೆ ಲಭ್ಯವಿದ್ದು, 18 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಲಸಿಕೆ ಹಾಗೂ ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್ ಪಡೆದು 84 ದಿನ ಮೀರಿದವರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ. ಅದೇ ರೀತಿ ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ ಪಡೆದು 28 ದಿನ ಪೂರ್ಣಗೊಂಡವರಿಗೆ ಎರಡನೇ ಡೋಸ್‌ನ್ನು ನೀಡಲಾಗುವುದು ಎಂದೂ ಅವರು ತಿಳಿಸಿದರು.

ನಾಳೆ ಲಸಿಕಾ ಕೇಂದ್ರಗಳಲ್ಲಿ ಕೋವಿಡ್-19 ಮಾದರಿ ಪರೀಕ್ಷೆ (ಸ್ವ್ಬಾಬ್ ಟೆಸ್ಟ್) ಇರುವುದಿಲ್ಲ ಎಂದೂ ಡಿಎಚ್‌ಓ ಹೇಳಿದ್ದಾರೆ. ಲಸಿಕೆ ಅಥವಾ ಲಸಿಕಾ ಕೇಂದ್ರಗಳ ಕುರಿತು ಯಾವುದೇ ಮಾಹಿತಿಗಳು ಬೇಕಾದಲ್ಲಿ ದೂರವಾಣಿ ಸಂಖ್ಯೆ: 9663957222ನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚುವರಿ ಡೋಸ್‌ಗಳು ಎಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಯಾರಿಗಾದರೂ ಡೋಸ್ ಕೊರತೆಯಾದಲ್ಲಿ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಪಡೆಯಬಹುದು ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News