'ನಿಮ್ಮೂರಿನ ತ್ಯಾಜ್ಯ ಎಸೆಯುವ ಜಾಗ ಗುರುತಿಸಿ'

Update: 2021-09-21 15:48 GMT

ಉಡುಪಿ, ಸೆ.21: ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಉಡುಪಿ ಜಿಲ್ಲೆಯನ್ನು ಮುಂದಿನ ಅಕ್ಟೋಬರ್ 2ರಂದು ‘ಕಪ್ಪುಚುಕ್ಕಿ ರಹಿತ ಜಿಲ್ಲೆ’ (ಬ್ಲ್ಯಾಕ್‌ ಸ್ಪಾಟ್ ಫ್ರಿ) ಜಿಲ್ಲೆಯೆಂದು ಘೋಷಿಸಲು ಕಾರ್ಯತಂತ್ರ ರೂಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಮುಖ್ಯವಾಗಿ ರಸ್ತೆ, ಬಸ್‌ನಿಲ್ದಾಣ, ನದಿ ಬದಿಗಳಲ್ಲಿ ನಿರಂತರ ತ್ಯಾಜ್ಯ ಸುರಿಯುವಂತಹ ಜಾಗಗಳನ್ನು ಗುರುತಿಸಲಾಗುತ್ತಿದೆ. ಇದನ್ನು ಗ್ರಾಮ ಪಂಚಾಯತ್‌ಗಳ ಸಹಕಾರದಿಂದ ನಿರಂತರ ತ್ಯಾಜ್ಯಮುಕ್ತ ಜಾಗವಾಗುವಂತೆ ಪರಿವರ್ತಿಸಲು ಉದ್ದೇಶಿಸಲಾಗಿದೆ.

ಇದಕ್ಕೆ ಊರಿನ ಸಾರ್ವಜನಿಕರ ಸಹಕಾರದ ಅಗತ್ಯವಿದ್ದು, ಇಂತಹ ಬ್ಲ್ಯಾಕ್ ಸ್ಪಾಟ್ ಜಾಗಗಳು ನಿಮ್ಮ ಸುತ್ತಮುತ್ತ ಕಂಡುಬಂದಲ್ಲಿ ಪೋಟೊ ತೆಗೆದು ದೂರವಾಣಿ ಸಂಖ್ಯೆ: 9483330564ಕ್ಕೆ ವ್ಯಾಟ್ಸಪ್ ಮೂಲಕ ಕಳುಹಿಸಿಕೊಡ ಬಹುದು. ಜೊತೆಗೆ ಈ ಜಾಗ ಕಂಡುಬರುವ ಪ್ರದೇಶದ ಹೆಸರು ಹಾಗೂ ಗ್ರಾಮಪಂಚಾಯತ್‌ನ್ನು ದಾಖಲಿಸಿ. ಸಕ ಹಾಕುವವರ ಬಗ್ಗೆ ಮಾಹಿತಿ ಇದ್ದರೆ, ಕಸ ಸುರಿಯುವ ವಾಹನದ ನಂಬರ್ ಇದ್ದರೆ ಅದನ್ನೂ ಈ ವಾಟ್ಸಪ್‌ಗೆ ಕಳುಹಿಸಿಕೊಂಡುವಂತೆ ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ತಿಳಿಸಿದ್ದಾರೆ.

ಬ್ಲ್ಯಾಕ್‌ಸ್ಪಾಟ್ ಜಾಗದ ಬಗ್ಗೆ ಮಾಹಿತಿ ನೀಡಿದವರ ಮೊಬೈಲ್ ಸಂಖ್ಯೆ ಹಾಗೂ ಹೆಸರನ್ನು ಬಹಿರಂಗ ಪಡಿಸದೇ ಗೌಪ್ಯವಾಗಿರಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News