ಹೃದ್ರೋಗ ಪರಿಹರಿಸುವಲ್ಲಿ ಇಂಡಿಯಾನಾ ಆಸ್ಪತ್ರೆಯ ಪರಿಣತಿ ಮುಂಚೂಣಿಗೆ

Update: 2021-09-21 17:15 GMT

ಮಂಗಳೂರು : ಹೃದಯ ಸಂಬಂಧಿ ಕಾಯಿಲೆಗಳನ್ನು ನಿಭಾಯಿಸುವಲ್ಲಿ ಇಂಡಿಯಾನಾ ಆಸ್ಪತ್ರೆಯ ಪರಿಣತಿ ಮತ್ತೊಮ್ಮೆ ಅನಾವರಣಗೊಂಡಿದೆ. ಇತ್ತೀಚೆಗೆ ಹೃದಯ ಮತ್ತು ಮೆದುಳಿಗೆ ಸರಿಯಾದ ರಕ್ತದ ಹರಿವಿಲ್ಲದೆ ತೀವ್ರ ಸಮಸ್ಯೆಗಳಿಂದ ಬಳಲುತ್ತಿದ್ದ 54 ವರ್ಷದ ಮಹಿಳೆಯೊಬ್ಬರಿಗೆ ಆಸ್ಪತ್ರೆಯ ವೈದ್ಯರು ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಿದ ನಂತರ ಮರುಜೀವ ನೀಡಿದರು.

ರೋಗಿ ತನ್ನ ಹೃದಯದಲ್ಲಿ ಹಾಗೂ ಮೆದುಳಿನಲ್ಲಿ ಅನೇಕ ಬ್ಲಾಕ್‌ಗಳನ್ನು ಹೊಂದಿದ್ದು, ತನ್ನ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸೂಕ್ತ ಆಸ್ಪತ್ರೆಯನ್ನು ಹುಡುಕುತ್ತಿದ್ದರು. ಆಕೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೂಚಿಸಲಾಗಿತ್ತು. ಆದರೆ ಆಕೆಯ ಹೃದಯ ಮತ್ತು ಮೆದುಳಿನಲ್ಲಿ ಅನೇಕ ಅಪಾಯಕಾರಿ ಬ್ಲಾಕ್‌ಗಳಿದ್ದ ಕಾರಣ ಆಕೆ ಸಂಪರ್ಕಿಸಿದ ಅನೇಕ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸಿದ್ಧರಿರಲಿಲ್ಲ. ಬೈಪಾಸ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆಕೆ ಪಾರ್ಶ್ವವಾಯುವಿನಿಂದ ಬಳಲುವ ಅಪಾಯವಿತ್ತು ಎನ್ನಲಾಗಿದೆ.

ಈ ಸಮಯದಲ್ಲಿ ಆಕೆಯ ಸಂಬಂಧಿಗಳು ಈ ಕ್ಷೇತ್ರದಲ್ಲಿ ಇಂಡಿಯಾನಾ ಆಸ್ಪತ್ರೆಯ ಪರಿಣತಿಯ ಬಗ್ಗೆ ಕೇಳಿದರು. ಆಸ್ಪತ್ರೆಯನ್ನು ಸಂಪರ್ಕಿಸಿದರು. ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಮತ್ತು ಅವರ ತಂಡವು ಆಕೆಗೆ ಶಸ್ತ್ರಚಿಕಿತ್ಸೆಯಲ್ಲದೆ ಕ್ಯಾರೊಟಿಡ್ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟಿಂಗ್‌ನ್ನು ಯಶಸ್ವಿಯಾಗಿ ನಡೆಸಲಾಯಿತು. ಆಕೆಯ ಮೆದುಳಿನಲ್ಲಿರುವ ಬ್ಲಾಕ್‌ಗಳನ್ನು ತೆಗೆದು ಹಾಕಿದರು. ನಂತರ ಬೀಟಿಂಗ್ ಹಾರ್ಟ್ ಸರ್ಜರಿ ನಡೆಸಲಾಯಿತು. ಇದನ್ನು ಇಂಡಿಯಾನಾದ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಎಂ. ಕೆ. ಮೂಸಾ ಕುಂಞಿ ನಡೆಸಿದರು.

ರೋಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಸುಧಾರಿತ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಸೆಂಟರ್, ಅಡ್ವಾನ್ಸ್ಡ್ ಕಾರ್ಡಿಯಾಕ್ ಸರ್ಜರಿ ಸೆಂಟರ್, ಪರಿಣತಿಯುಳ್ಳ ಕಾರ್ಡಿಯಾಲಜಿಸ್ಟ್‌ಗಳು, ಕಾರ್ಡಿಯಾಕ್ ಸರ್ಜನ್‌ಗಳ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಲಭ್ಯತೆ ಇದ್ದುದರಿಂದ ಈ ಪ್ರಕರಣದಲ್ಲಿ ಯಶಸ್ಸು ಸಾಧ್ಯವಾ ಯಿತು. ಇಂಡಿಯಾನಾ ಆಸ್ಪತ್ರೆ ಅತ್ಯಂತ ಕಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚು ಅಪಾಯವಿಲ್ಲದೆ ನಿರ್ವಹಿಸಬಲ್ಲದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News