ಪೆಂಟಗನ್ ಪ್ರಮುಖ ಹುದ್ದೆಗೆ ಭಾರತೀಯ ಅಮೆರಿಕನ್ ಆಶೀಶ್ ರನ್ನು ನೇಮಿಸಿದ ಬೈಡನ್

Update: 2021-09-22 09:33 GMT
Photo source: Twitter/@ashvazirani)

ವಾಷಿಂಗ್ಟನ್: ಪೆಂಟಗನ್ ನ ಪ್ರಮುಖ ಹುದ್ದೆಯೊಂದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು  ಭಾರತೀಯ ಅಮೆರಿಕನ್ ಆಶೀಶ್ ವಜೀರಾನಿ ಅವರನ್ನು ನೇಮಿಸಿದ್ದಾರೆ.

ಆಶೀಶ್ ಅವರನ್ನು ರಕ್ಷಣಾ ಇಲಾಖೆಯ ಸಿಬ್ಬಂದಿ ಹಾಗೂ ಸನ್ನದ್ಧತೆ ವಿಭಾಗದ ಉಪ ಅಧೀನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಮ್ಯಾನೇಜ್ ಮೆಂಟ್ ಕನ್ಸಲ್ಟಂಟ್ ಆಗಿರುವ ಆಶೀಶ್, ಪ್ರಸ್ತುತ ‘ಎ2ಒ’ಸ್ಟ್ರಾಟಜೀಸ್’ ಎಂಬ ಸಂಸ್ಥೆಯ ಪ್ರಾಂಶುಪಾಲರಾಗಿದ್ದಾರೆ

ಆಶೀಶ್ ವಜೀರಾನಿ ಅವರು ವಾಂಡರ್‌ಬಿಲ್ಟ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ, ನಾರ್ತ್ ವೆಸ್ಟರ್ನ್ ಯುನಿವರ್ಸಿಟಿಯಲ್ಲಿ ಮೆಕ್‌ಕಾರ್ಮಿಕ್ ಸ್ಕೂಲ್ ಆಫ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಆಫ್ ಎಂಜಿನಿಯರಿಂಗ್ ಹಾಗೂ  ನಾರ್ತ್ ವೆಸ್ಟರ್ನ್ ಯುನಿವರ್ಸಿಟಿಯ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅವರು 3 ವರ್ಷದವರಿದ್ದಾಗ ಅವರ ಕುಟುಂಬ ಅಮೆರಿಕಕ್ಕೆ ವಲಸೆ ಹೋಗಿತ್ತು.

ವಜೀರಾನಿ ಅವರು ಅಮೆರಿಕದ ನೌಕಾಪಡೆಯಲ್ಲಿ 1986ರಿಂದ 1993ರ ತನಕ ವಿವಿಧ  ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ಶ್ವೇತ ಭವನದ ಪ್ರಕಟನೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News