ಖ್ಯಾತ ವಿದ್ವಾಂಸ ಮೌಲಾನ ಕಲೀಂ ಸಿದ್ದೀಖಿ ಅವರನ್ನು ಬಂಧಿಸಿದ ಉತ್ತರ ಪ್ರದೇಶ ಎಟಿಎಸ್

Update: 2021-09-22 10:41 GMT
ಮೌಲಾನ ಕಲೀಂ ಸಿದ್ದೀಖಿ (Photo: thequint.com)

ಲಕ್ನೋ: ಉತ್ತರ ಪ್ರದೇಶದ ಉಗ್ರ-ನಿಗ್ರಹ ಪಡೆ ಮಂಗಳವಾರ ಖ್ಯಾತ ಧಾರ್ಮಿಕ ವಿದ್ವಾಂಸ ಮೌಲಾನ ಕಲೀಂ ಸಿದ್ದೀಖಿ ಅವರನ್ನು ಧಾರ್ಮಿಕ ಮತಾಂತರಗಳ ಆರೋಪದ ಮೇಲೆ ಮೀರತ್‍ನಿಂದ ಬಂಧಿಸಿದೆ. ಮೌಲಾನ ಅವರು ಗ್ಲೋಬಲ್ ಪೀಸ್ ಸೆಂಟರ್ ಹಾಗೂ ಜಮೀಯತ್-ಇ-ವಲೀಯುಲ್ಲಾಹ್ ಇದರ ಅಧ್ಯಕ್ಷರಾಗಿದ್ದಾರೆ.

ಕಾರ್ಯಕ್ರಮವೊಂದನ್ನು ಮುಗಿಸಿ ಮುಝಪ್ಫರನಗರಕ್ಕೆ ಮರಳುತ್ತಿದ್ದ ಮೌಲಾನ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

"ಮೌಲಾನ ಅವರ ಟ್ರಸ್ಟ್ ರೂ 3 ಕೋಟಿ ವಿದೇಶಿ ದೇಣಿಗೆ ಪಡೆದಿದೆ ಹಾಗೂ ಇದರಲ್ಲಿ ರೂ. 1.5 ಕೋಟಿ ಬಹರೈನ್‍ನಿಂದ ಪಡೆಯಲಾಗಿದೆ. ಪ್ರಕರಣ ತನಿಖೆಗೆ ಎಟಿಎಸ್‍ನ ಆರು ತಂಡಗಳನ್ನು ರಚಿಸಲಾಗಿದೆ,'' ಎಂದು ಉತ್ತರ ಪ್ರದೇಶ ಎಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಎಟಿಎಸ್ ಬೇಧಿಸಿದ ಮತಾಂತರ ಜಾಲವು ಭಾರತದಲ್ಲಿ ಸುಮಾರು 1000 ಜನರ ಮತಾಂತರ ನಡೆಸಿದೆ ಎಂದು ಉತ್ತರಪ್ರದೇಶ ಎಟಿಎಸ್ ಐಜಿ ಜಿ ಕೆ ಗೋಸ್ವಾಮಿ ಹೇಳಿದ್ದಾರೆ.

ಮೌಲಾನ ಅವರ ಬಂಧನ ಒಂದು ರಾಜಕೀಯ ಪ್ರೇರಿತ ಕ್ರಮ ಎಂದು ಆಪ್ ಶಾಸಕ ಅಮಾನತುಲ್ಲಾ ಖಾನ್ ಆರೋಪಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆಗಳನ್ನು ಗೆಲ್ಲಲು ಇನ್ನು ಎಷ್ಟು ಕೆಳಮಟ್ಟಕ್ಕೆ ಬಿಜೆಪಿ ಇಳಿಯಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News