ರಷ್ಯಾ: ಆರು ಸಿಬ್ಬಂದಿಯಿದ್ದ ವಿಮಾನ ಕಣ್ಮರೆ

Update: 2021-09-22 11:54 GMT

ಮಾಸ್ಕೊ: ಆರು ಜನರನ್ನು ಹೊತ್ತು ಹಾರಾಟ ನಡೆಸುತ್ತಿದ್ದ ಆಂಟೊನೊವ್ -26 ವಿಮಾನವು ರಷ್ಯಾದ ಖಬರೋವ್ಸ್ಕ್ ಪ್ರದೇಶದಲ್ಲಿ ರಾಡಾರ್ ಸಂಪರ್ಕ ಕಡಿದುಕೊಂಡು ಕಣ್ಮರೆಯಾಗಿದೆ ಎಂದು ರಾಷ್ಟ್ರದ ತುರ್ತು ಸೇವೆಗಳ ಸಚಿವಾಲಯ ಬುಧವಾರ ತಿಳಿಸಿದೆ.

ನಾಪತ್ತೆಯಾದ ವಿಮಾನವನ್ನು ಶೋಧಿಸಲು ಎಂಐ -8 ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿದೆ ಎಂದು ತುರ್ತು ಸೇವೆಗಳ ಮೂಲವನ್ನು  ಉಲ್ಲೇಖಿಸಿ Sputnik news ವರದಿ ಮಾಡಿದೆ.

"ಖಬರೋವ್ಸ್ಕ್‌ ನೈರುತ್ಯ ದಿಕ್ಕಿನಲ್ಲಿ 38 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ರಾಡಾರ್‌ಗಳಿಂದ ಆರು ಸಿಬ್ಬಂದಿಯಿದ್ದ  ಆನ್ -26 ವಿಮಾನ ಕಣ್ಮರೆಯಾಯಿತು" ಎಂದು ತುರ್ತು ಸೇವೆಗಳ ವಕ್ತಾರರು ತಿಳಿಸಿದ್ದಾರೆ.

ವಿಮಾನವು ತನ್ನ ಸಂವಹನ ಸಾಧನಗಳನ್ನು ಪರೀಕ್ಷಿಸಲು ಹಾರಾಟ ನಡೆಸುತ್ತಿತ್ತು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಟ್ಟ ಹವಾಮಾನ ಘಟನೆಗೆ ಕಾರಣವಿರಬಹುದು ಎಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News