ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯತ್ವ ತೊರೆಯುವ ಕುರಿತ ವರದಿ ನಿರಾಕರಿಸಿದ ಫ್ರಾನ್ಸ್

Update: 2021-09-22 14:36 GMT

ಪ್ಯಾರಿಸ್, ಸೆ.22: ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯತ್ವವನ್ನು ತೊರೆಯಲು ಫ್ರಾನ್ಸ್ ನಿರ್ಧರಿಸಿದೆ ಎಂದು ಬ್ರಿಟನ್‌ನ ‘ದಿ ಡೈಲಿ ಟೆಲಿಗ್ರಾಫ್’ನಲ್ಲಿ ಪ್ರಕಟವಾದ ವರದಿಯನ್ನು ಫ್ರಾನ್ಸ್ ನಿರಾಕರಿಸಿದೆ.

ಯುರೋಪಿಯನ್ ಸೇನೆಗೆ ಯುರೋಪಿಯನ್ ಯೂನಿಯನ್(ಇಯು) ಇತರ ಸದಸ್ಯರ ಬೆಂಬಲ ಹಾಗೂ ಯುರೋಪಿಯನ್ ಯೂನಿಯನ್ ತನ್ನ ವಿದೇಶ ನೀತಿಯನ್ನು ರೂಪಿಸುವ ರೀತಿಯಲ್ಲಿ ಸುಧಾರಣೆಗೆ ಬದಲಾಗಿ ಭದ್ರತಾ ಸಮಿತಿಯ ಖಾಯಂ ಸದಸ್ಯತ್ವನ್ನು ವಿನಿಮಯ ಮಾಡಿಕೊಳ್ಳಲು ಫ್ರಾನ್ಸ್ ಬಯಸುತ್ತಿರುವುದಾಗಿ ಇಯು ಸಂಸದರು ಹೇಳಿದ್ದಾರೆ ಎಂದು ವರದಿಯಾಗಿತ್ತು.

ಈ ವರದಿಯನ್ನು ಅಧಿಕೃತವಾಗಿ ನಿರಾಕರಿಸುತ್ತಿದ್ದೇವೆ. ಈ ಹುದ್ದೆ ನಮ್ಮದು ಮತ್ತು ನಮ್ಮಲ್ಲೇ ಉಳಿಯಲಿದೆ. ಯುರೋಪಿಯನ್ ಯೂನಿಯನ್ ಜತೆ ಗರಿಷ್ಟ ಸಹಯೋಗದಿಂದ ಕಾರ್ಯನಿರ್ವಹಿಸಲಿದ್ದೇವೆ ಎಂದು ಫ್ರಾನ್ಸ್ ಸರಕಾರದ ವಕ್ತಾರರು ಹೇಳಿದ್ದಾರೆ.

ಬ್ರಿಟನ್, ಚೀನಾ, ರಶ್ಯ, ಅಮೆರಿಕ ಮತ್ತು ಫ್ರಾನ್ಸ್ ವಿಶ್ವಸಂಸ್ಥೆ ಭದ್ರತಾ ಸಮಿತಿಯ 5 ಖಾಯಂ ಸದಸ್ಯ ರಾಷ್ಟ್ರಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News