ಉಕ್ರೇನ್ ಅಧ್ಯಕ್ಷರ ಸಹಾಯಕ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ

Update: 2021-09-22 14:37 GMT

ಕೀವ್, ಸೆ.22: ಉಕ್ರೇನ್ ಅಧ್ಯಕ್ಷ ವೊಲೊದಿಮೀರ್ ಝೆಲೆಂಸ್ಕಿಯ ಪ್ರಧಾನ ಸಲಹೆಗಾರ ಮತ್ತು ಸಹಾಯಕ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದ್ದು ಇದೊಂದು ಹತ್ಯಾ ಯತ್ನದ ಪ್ರಕರಣವಾಗಿದೆ ಎಂದು ಉಕ್ರೇನ್‌ನ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ರಾಜಧಾನಿ ಕೀವ್‌ನಿಂದ ಸುಮಾರು 5 ಕಿ.ಮೀ ದೂರದ ಲೆಸ್ನಿಕಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಅಧ್ಯಕ್ಷ ಝೆಲೆಂಸ್ಕಿಯ ಅತ್ಯಂತ ಆಪ್ತ ಸಲಹೆಗಾರ ಮತ್ತು ಸಹಾಯಕ ಸೆರಿಯ್ ಶೆಫಿರ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದ್ದು ಸುಮಾರು 10 ಬುಲೆಟ್‌ಗಳು ಕಾರಿಗೆ ಅಪ್ಪಳಿಸಿವೆ. ಶೆಫಿರ್ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಶ್ಯದ ಆರ್‌ಐಎ ನೊವೋಸ್ತಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಇದೊಂದು ಪೂರ್ವನಿಯೋಜಿತ ಕೊಲೆ ಸಂಚು ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಧ್ಯಕ್ಷ ವೊಲೊದಿಮೀರ್ ಝೆಲೆಂಸ್ಕಿ ಪ್ರಸ್ತುತ ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News