ಕೋವಿಡ್ ಲಸಿಕೆ ಪ್ರಮಾಣಪತ್ರ ಕನಿಷ್ಠ ಮಾನದಂಡಗಳನ್ನು ಪೂರೈಸಬೇಕು: ಬ್ರಿಟನ್ ಸರಕಾರ

Update: 2021-09-23 08:04 GMT

ಲಂಡನ್: ಎಲ್ಲಾ ದೇಶಗಳ ಕೋವಿಡ್-19 ಲಸಿಕೆ ಪ್ರಮಾಣಪತ್ರಗಳು ಒಂದು ಕನಿಷ್ಠ ಮಾನದಂಡವನ್ನು ಪೂರೈಸಬೇಕು ಮತ್ತು ತನ್ನ ಅಂತರಾಷ್ಟ್ರೀಯ ಪ್ರಯಾಣ ನಿಯಮಗಳಿಗೆ ಸಂಬಂಧಿಸಿದಂತೆ ಎದ್ದಿರುವ ಸಮಸ್ಯೆ ಕುರಿತಂತೆ ಭಾರತದ ಜತೆ ಹಂತಹಂತವಾಗಿ ಚರ್ಚಿಸಿ ಇತ್ಯರ್ಥಪಡಿಸಿಕೊಳ್ಳುವುದಾಗಿ ಬ್ರಿಟನ್ ಸರಕಾರ ಹೇಳಿದೆ.

ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುವ ಕೋವಿಶೀಲ್ಡ್ ಲಸಿಕೆಯನ್ನು ಮಾನ್ಯತೆ ಪಡೆದ ಲಸಿಕೆಗಳ ಪಟ್ಟಿಗೆ ಇಂಗ್ಲೆಂಡ್ ಸೇರಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಆದರೆ ಭಾರತದ ಲಸಿಕೆ ಪ್ರಮಾಣಪತ್ರ ಅನುಮೋದಿತ  ಪ್ರಮಾಣಪತ್ರಗಳ ಪಟ್ಟಿಯಲ್ಲಿಲ್ಲದೇ ಇರುವುದರಿಂದ ಭಾರತೀಯರು ಇಂಗ್ಲೆಂಡ್ ಪ್ರವೇಶಿಸಿದೊಡನೆ ಕಡ್ಡಾಯ 10 ಕ್ವಾರಂಟೈನಿಗೊಳಗಾಗಬೇಕಿರುವುದರಿಂದ ಸಮಸ್ಯೆ ಎದುರಾಗಿದೆ.

ಅನುಮೋದಿತ ಪ್ರಮಾಣಪತ್ರಗಳನ್ನು ಹೊಂದಿರುವ  ದೇಶಗಳ ಪಟ್ಟಿಗೆ ಸೇರ್ಪಡೆಗಳ ಕುರಿತಂತೆ ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಎಂದು ಇಂಗ್ಲೆಂಡ್ ಹೇಳುತ್ತಿದೆಯಾದರೂ ಭಾರತದ ಲಸಿಕೆ ಪ್ರಮಾಣಪತ್ರ ಅನುಮೋದಿತ ಪಟ್ಟಿಗೆ ಸೇರ್ಪಡೆಯಾಗಲಿದೆಯೇ ಎಂಬ ಕುರಿತು ಸ್ಪಷ್ಟತೆಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News