ದಿಲ್ಲಿ:ಪಕ್ಷದ ಆಡಳಿತವಿರುವ ನಗರಪಾಲಿಕೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದ ಬಿಜೆಪಿ ಸಂಸದ
ಹೊಸದಿಲ್ಲಿ: ವಾಯುವ್ಯ ದಿಲ್ಲಿ ಸಂಸದ ಹನ್ಸ್ ರಾಜ್ ಹನ್ಸ್, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಬರೆದ ಪತ್ರದಲ್ಲಿ, ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಮ್ಮ ಕ್ಷೇತ್ರದ ಕೆಲವು ಪ್ರದೇಶವು ನೀರಿನಿಂದ ಆವೃತ್ತವಾಗಿತ್ತು. ಇದರಿಂದ ಮೂರು ಜನರು ಸಾವನ್ನಪ್ಪಿದ್ದಾರೆ ಹಾಗೂ ಅನೇಕ ಆಸ್ತಿಗಳಿಗೆ ಹಾನಿಯಾಗಿದೆ ಎಂದು ಬರೆದಿದ್ದಾರೆ.
ತಮ್ಮ ಕ್ಷೇತ್ರವು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ದಿಲ್ಲಿಯ ನೀರಾವರಿ ಹಾಗೂ ಪ್ರವಾಹ ನಿಯಂತ್ರಣ, ದಿಲ್ಲಿ ಜಲ ಮಂಡಳಿ, ದಿಲ್ಲಿ ನಗರ ಆಶ್ರಯ ಸುಧಾರಣೆ ಮಂಡಳಿ, ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ) ಹಾಗೂ ದಿಲ್ಲಿ ಮುನ್ಸಿಪಲ್ ಕಾರ್ಪೋರೇಶನ್ ಗೆ ತಿಳಿಸಿದ್ದೇನೆ ಎಂದು ಹೇಳಿದರು. ಪುನರಾವರ್ತಿತ ಸಂವಹನಗಳ ಹೊರತಾಗಿಯೂ, ‘ಯಾವುದೇ ತೃಪ್ತಿದಾಯಕ ಕ್ರಮವನ್ನು’ ಅವರಿಂದ ತೆಗೆದುಕೊಳ್ಳಲಾಗಿಲ್ಲ ಎಂದು ಸಂಸದ ಹನ್ಸ್ ರಾಜ್ ಹನ್ಸ್ ಅವರು ಪತ್ರದಲ್ಲಿ ಬರೆದಿದ್ದಾರೆ.
ತನ್ನ ಪತ್ರದಲ್ಲಿ, ಸಂಸದ ಹನ್ಸ್ ರಾಜ್ ಹನ್ಸ್ ಅವರುಲೆಫ್ಟಿನೆಂಟ್ ಗವರ್ನರ್ ಗೆ ಸಭೆ ಕರೆಯುವಂತೆ ಮನವಿ ಮಾಡಿದರು.
ಪತ್ರದಲ್ಲಿ ಉಲ್ಲೇಖಿಸಲಾದ ಮೊದಲ ಮೂರು ಇಲಾಖೆಗಳು ದಿಲ್ಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರದ ವ್ಯಾಪ್ತಿಗೆ ಒಳಪಡುತ್ತವೆ ಹಾಗೂ ಡಿಡಿಎ ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಕಳೆದ 14 ವರ್ಷಗಳಿಂದ ಎಲ್ಲಾ ಮೂರು ನಗರಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.