ಬಿಎಸ್ಎಫ್ ಕಾನ್ಸ್ಟೇಬಲ್ ನಿಂದ ಮೇಲಾಧಿಕಾರಿಯ ಹತ್ಯೆ: ಆರೋಪಿ ಯೋಧ ಕೂಡಾ ಗುಂಡೇಟಿಗೆ ಬಲಿ

Update: 2021-09-24 17:17 GMT

ಹೊಸದಿಲ್ಲಿ, ಸೆ.24: ತ್ರಿಪುರದಲ್ಲಿರುವ ಬಾಂಗ್ಲಾ ಅಂತರ್ ರಾಷ್ಟ್ರೀಯ ಗಡಿ ಸಮೀಪದ ಭಾರತೀಯ ಗಡಿಭದ್ರತಾ ಪಡೆಯ ಠಾಣೆಯಲ್ಲಿ ಯೋಧರಿಬ್ಬರ ನಡುವೆ ಸಂಭವಿಸಿದ ಮಾತಿನ ಚಕಮಕಿಯ ಬಳಿಕ ನಡೆದ ಶೂಟೌಟ್ನಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೋರ್ವ ಹಿರಿಯ ಅಧಿಕಾರಿ ಗಾಯಗೊಂಡಿದ್ದಾರೆ.

 ಗೋಮತಿ ಜಿಲ್ಲೆಯ ಕರ್ಬೂಕ್ ಉಪವಿಭಾಗದಲ್ಲಿರುವ ಖಾಗ್ರಾಚೇರಿ ಠಾಮೆಯಲ್ಲಿರುವ ಗಡಿ ಬೇಲಿ ಸಮೀಪ ಗುರುವಾರ ಸಂಜೆ ಈ ಘಟನೆ ನಡೆದಿದೆ. 20ನೇ ಬೆಟಾಲಿಯನ್ಗೆ ಸೇರಿದ ಹೆಡ್ಕಾನ್ಸ್ಟೇಬಲ್ ಸತ್ಬೀರ್ಸಿಂಗ್ ಹಾಗೂ ಕಾನ್ಸ್ಟೇಬಲ್ ಪ್ರತಾಪ್ಸಿಂಗ್ ನಡುವೆ  ಸಣ್ಣ ವಿಷಯಕ್ಕೆ ಸಂಬಂಧಿಸಿ ಜಗಳವುಂಟಾಗಿದ್ದು, ಆನಂತರ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭ ಪ್ರತಾಪ್ ಸಿಂಗ್, ತನ್ನ ಸಹದ್ಯೋಗಿ ಸತ್ಬೀರ್‌ ಸಿಂಗ್‌ ಗೆ ಗುಂಡಿಕ್ಕಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆನಂತರ ಪ್ರತಾಪ್ ಸಿಂಗ್ನನ್ನು ಸ್ಥಳದಲ್ಲೇ ನಿಯೋಜಿತನಾಗಿದ್ದ ಬಿಎಸ್ಎಫ್ ಕಾವಲುಗಾರನೊಬ್ಬ ಗುಂಡಿಕ್ಕಿ ಸಾಯಿಸಿದ್ದಾಏನೆ.

ಘಟನೆಯ ಬಳಿಕ ಹಂತಕ ಯೋಧನನ್ನು ಸ್ಥಳಲ್ಲಿ ನಿಯೋಜಿತನಾಗಿದ್ದ ಕಾವಲುಗಾರನೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಕಾನ್ಸ್ಸ್ಟೇಬಲ್ ಪ್ರತಾಪ್ ಸಿಂಗ್ ಸ್ಥಳದಲ್ಲಿದ ಠಾಣಾ ಕಮಾಂಡರ್ ಸಬ್ಇನ್ಸ್ಪೆಕ್ಟರ್ ರಾಮ್ ಕುಮಾರ್ ಮೇಲೂ ಗುಂಡು ಹಾರಿಸಿದ್ದರಿಂದ ಅವರ ಎರಡೂ ಕಾಲುಗಳಿಗೆ ಗುಂಡಿನ ಗಾಯಗಳಾಗಿವೆಯೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ ನೈಜ ಕಾರಣವನ್ನು ಪತ್ತೆಹಚ್ಚಲು ವಿಭಾಗೀಯ ತನಿಖೆಗೆ ನಡೆಸಲಾಗುವುದು ಹಾಗೂ ಸಿಲಾಚೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗುವುದೆಂದು ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News