ಐಪಿಎಲ್ : ಆರ್ ಸಿಬಿ ವಿರುದ್ಧ ಚೆನ್ನೈ ಜಯಭೇರಿ

Update: 2021-09-24 17:50 GMT

ಶಾರ್ಜಾ: ಬ್ಯಾಟ್ಸ್ ಮನ್ ಗಳ ಸಂಘಟಿತ ಪ್ರದರ್ಶನ ಹಾಗೂ ಆಲ್ ರೌಂಡರ್ ಡ್ವೆಯ್ನ್ ಬ್ರಾವೊ ಅವರ ಅಮೋಘ ಬೌಲಿಂಗ್  ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ನ 35ನೇ ಪಂದ್ಯವನ್ನು 6 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 157 ರನ್ ಗುರಿ ಪಡೆದಿದ್ದ ಚೆನ್ನೈ ತಂಡ 18.1  ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್ (38) ಹಾಗೂ ಎಫ್ ಡು ಪ್ಲೆಸಿಸ್(31) ಮೊದಲ ವಿಕೆಟ್ ಗೆ 71 ರನ್ ಸೇರಿಸಿ ಉತ್ತಮ  ಆರಂಭ ನೀಡಿದರು.  ಅಂಬಟಿ ರಾಯುಡು(32), ಮೊಯಿನ್ ಅಲಿ(23), ಸುರೇಶ್ ರೈನಾ(ಔಟಾಗದೆ 17) ಎರಂಡಕೆಯ ಸ್ಕೋರ್ ಗಳಿಸಿದರು. ನಾಯಕ ಧೋನಿ ಔಟಾಗದೆ 11 ರನ್ ಗಳಿಸಿದರು.

ಬೆಂಗಳೂರು ಪರ ಹರ್ಷಲ್ ಪಟೇಲ್ (2-25) ಎರಡು ವಿಕೆಟ್ ಪಡೆದರು.

ಇದಕ್ಕೂ  ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News