ಅಸ್ಸಾಂ ಪೊಲೀಸ್ ಗುಂಡಿನ ದಾಳಿ ಖಂಡಿಸಿ ಡಿವೈಎಫ್ಐ ನೇತೃತ್ವದಲ್ಲಿ ದೇರಳಕಟ್ಟೆಯಲ್ಲಿ ಪ್ರತಿಭಟನೆ

Update: 2021-09-24 18:23 GMT

ದೇರಳಕಟ್ಟೆ: ಅಸ್ಸಾಂ ಪೊಲೀಸ್ ಗುಂಡಿನ ದಾಳಿ ಖಂಡಿಸಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಅಸ್ಸಾಣನಲ್ಲಿ ನಡೆದ ಘಟನೆ ಸರಕಾರ ಪ್ರಾಯೋಜಿತ ಕೃತ್ಯ, ಅಸ್ಸಾಂ ನ ದೋಲ್ ಪುರದಲ್ಲಿ ಕುಟಂಬವನ್ನು ದೌರ್ಜನ್ಯದ ಮೂಲಕ ವಕ್ಕಲೆಬ್ಬಿಸಲಾಗುತ್ತಿದೆ. ಅತ್ಯಂತ ಕ್ರೂರವಾಗಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ನಿರಾಯುಧ ಪ್ರತಿಭಟನಾಕಾರನನ್ನು ಎದೆಗೆ ಗುಂಡಿಟ್ಟು, ಮೃತದೇಹದ ಮೇಲೆ ಪೊಲೀಸ್ ಮತ್ತು ಸರಕಾರಿ ಪತ್ರಕರ್ತನೊಬ್ಬ ನಡೆಸಿದ ಕೃತ್ಯ ದೇಶವೇ ತಲೆತಗ್ಗಿಸುವಂತೆ ಮಾಡಿದೆ ಎಂದು ಇಮ್ತಿಯಾಜ್ ಹೇಳಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಡಿವೈಎಫ್ಐ ಉಳ್ಳಾಲ ವಲಯ ಮುಖಂಡರಾದ ಎಡ್ವಕೇಟ್ ನಿತಿನ್ ಕುತ್ತಾರ್ ಮಾತನಾಡಿದರು. ಈ ಸಂದರ್ಭ ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷರಾದ ರಫೀಕ್ ಹರೇಕಳ, ಡಿವೈಎಫ್ಐ ಉಳ್ಳಾಲ ಮುಖಂಡರಾದ ರಝಾಕ್ ಮುಡಿಪು, ಅಶ್ರಪ್ ಹರೇಕಳ, ಅಬ್ಬರಾಣಿ ಬಸ್ಸ್ ನೌಕರರ ಸಂಘದ ಅಧ್ಯಕ್ಷರಾದ ಜಗದೀಶ್, ಎಸ್ ಎಫ್ ಐ ಮುಖಂಡರಾದ ತಿಲಕ್ ಕುತ್ತಾರ್ , ಸಿಡಬ್ಲ್ಯೂಎಫ್ಐ ಮುಖಂಡರಾದ ಇಬ್ರಾಹಿಂ ಮದಕ, ಡಿವೈಎಫ್ಐ ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ, ರಝಾಕ್ ಮೊಂಟೆಪದವು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News