ಬ್ಯಾರೀಸ್ ಗ್ರೂಪ್ 'ಗ್ರೀನ್ ವಾಕಥಾನ್‌' ಸಮಾರೋಪ

Update: 2021-09-25 14:22 GMT

ಮಂಗಳೂರು, ಸೆ.25: ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ( ಬಿಐಟಿ ) ಹಾಗೂ ಬ್ಯಾರೀಸ್ ಎನ್ವಿರೋ ಅರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ( ಬೀಡ್ಸ್) ವಿಶ್ವ ಹಸಿರು ಕಟ್ಟಡ ಸಪ್ತಾಹದ ಪ್ರಯುಕ್ತ ಇಂದು ಬೆಳಗ್ಗೆ ಆಯೋಜಿಸಿದ್ದ ‘ಗ್ರೀನ್ ವಾಕಥಾನ್’ ಬಿಐಟಿ ಕ್ಯಾಂಪಸ್‌ನಲ್ಲಿ ಸಮಾರೋಪಗೊಂಡಿತು.

ದೇರಳಕಟ್ಟೆಯ ಬ್ಯಾರೀಸ್ ಟರ್ನಿಂಗ್ ಪಾಯಿಂಟ್‌ವರೆಗೆ ಗ್ರೀನ್ ವಾಕಥಾನ್ ನಲ್ಲಿ ಭಾಗಿಯಾದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಆ ಬಳಿಕ ಇನ್ನೋಳಿಯ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಸ್ವತಃ ಗಿಡಗಳನ್ನು ನೆಟ್ಟರಲ್ಲದೆ ಬಿಐಟಿ ವಿದ್ಯಾರ್ಥಿಗಳಿಂದಲೂ ಗಿಡಗಳನ್ನು ನೆಡಿಸುವ ಮೂಲಕ ಪರಿಸರ ಆಸಕ್ತಿ ಮೂಡಿಸಿದರು.

ಬಿಐಟಿ), (ಬೀಡ್ಸ್ ಮತ್ತು ಬಿಐಟಿ ಪಾಲಿಟೆಕ್ನಿಕ್‌ನ ನೂರಾರು ವಿದ್ಯಾರ್ಥಿಗಳು ಆಸಕ್ತಿಯಿಂದ ಗಿಡಗಳನ್ನು ನೆಟ್ಟರು.

ಸುಮಾರು 6 ಎಕರೆ ವಿಸ್ತೀರ್ಣದ ಜಾಗದಲ್ಲಿ ಬರ್ಮಾ, ಗಡುವಾ, ಸಿಹಿ, ಸ್ಟಾಕ್‌ಸೈ, ಟುಲ್ಟಾ ಸಹಿತ 5 ಬಗೆಯ 350ಕ್ಕೂ ಅಧಿಕ ಗಿಡಗಳನ್ನು 'ನೆಟ್ಟು ಗ್ರೀನ್ ವಾಕಥಾನ್‌' ಕಾರ್ಯಕ್ರಮ ಸಮಾರೋಪಗೊಳಿಸಿದರು.

ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್ ಹೊಂದಿರುವ ಇನ್ನೋಳಿ ಪರಿಸವು ಕಲ್ಲಿನ ಕೋರೆಗಳಿಂದ ತುಂಬಿದೆ. ಈ ಪರಿಸರವನ್ನು ಹಸಿರುಮಯಗೊಳಿಸುವ ಮಹತ್ತರವಾದ ಉದ್ದೇಶವನ್ನು ಬ್ಯಾರಿಸ್ ಗ್ರೂಪ್ ಹೊಂದಿದ್ದು, ಈ ನಿಟ್ಟಿನಲ್ಲಿ ಗಿಡಗಳನ್ನು ನೆಡುವ ಮೂಲಕ ಮೊದಲ ಹೆಜ್ಜೆ ಇಟ್ಟಿವೆ.

‘ಗ್ರೀನ್ ವಾಕಥಾನ್’ಗೆ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂ ಎದುರು ಮಂಗಳೂರು ವಿವಿ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಚಾಲನೆ ನೀಡಿದ್ದರು.

ವಿದ್ಯಾರ್ಥಿ ವೇತನ ವಿತರಣೆ

ಬ್ಯಾರೀಸ್ ಶಿಕ್ಷಣ ಸಂಸ್ಥೆಯ 20ಕ್ಕೂ ಅಧಿಕ ಸಿಬ್ಬಂದಿ ವರ್ಗದ ಸುಮಾರು 50ಕ್ಕೂ ಅಧಿಕ ಮಕ್ಕಳಿಗೆ 'ಶಿಕ್ಷಾ ಸುರಕ್ಷಾ' ಯೋಜನೆಯಡಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಬ್ಯಾರೀಸ್ ಗ್ರೂಪ್‌ನ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ವಿದ್ಯಾರ್ಥಿ ವೇತನ ವಿತರಿಸಿ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News