ಐಟಿಐನಲ್ಲಿ ಸೀಟುಗಳಿಗಾಗಿ ಅರ್ಜಿ ಆಹ್ವಾನ

Update: 2021-09-25 12:16 GMT

ಉಡುಪಿ, ಸೆ.25: ಉಡುಪಿಯ ಸರಕಾರಿ ಐ.ಟಿ.ಐ ಸಂಸ್ಥೆಯಲ್ಲಿ 2 ವರ್ಷ ಅವಧಿಯ ಐ.ಟಿ.ಐ ಕೋರ್ಸ್‌ಗಳಲ್ಲಿ ಖಾಲಿ ಉಳಿದಿರುವ ಕೆಲವು ಸ್ಥಾನಗಳ ಪ್ರವೇಶಕ್ಕಾಗಿ ಹಾಗೂ ಪ್ರಸಕ್ತ ಸಾಲಿನಿಂದ ಟಾಟಾ ಸಂಸ್ಥೆಯ ಸಹಯೋಗ ದೊಂದಿಗೆ ಉನ್ನತೀಕರಣಗೊಂಡ ರಾಜ್ಯ ವೃತ್ತಿ ಪರಿಷತ್ ಸಂಯೋಜನೆ ಪಡೆದ ಆಟೋಮೊಬೈಲ್ ಮತ್ತು ಇತರ ಹೊಸ ವೃತ್ತಿಗಳು ಪ್ರಾರಂಭವಾಗಲಿದ್ದು, ಈ ಕೋರ್ಸ್‌ಗಳ ಪ್ರವೇಶಕ್ಕಾಗಿ 10ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಂಸ್ಥೆಗೆ ಹಾಜರಾಗಿ ಕೂಡಲೇ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2986145, 9740541554 ಮತ್ತು 9738439619ನ್ನು ಸಂಪರ್ಕಿಸುವಂತೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News