ಸೈಕಲ್ ನಲ್ಲಿ ಬಟ್ಟೆ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ವ್ಯಕ್ತಿಯ ಮಗ ಯುಪಿಎಸ್ಸಿಯಲ್ಲಿ 45ನೇ ರ್ಯಾಂಕ್

Update: 2021-09-25 16:43 GMT
ಅನಿಲ್ ಬೋಸಾಕ್ ತಂದೆ ಬಿನೋದ್ ಬೋಸಾಕ್(ಮಧ್ಯದಲ್ಲಿರುವವರು) Photo: NDTV

ಪಾಟ್ನಾ: ಬಿಹಾರದ ಬಟ್ಟೆ ಮಾರಾಟಗಾರನ ಪುತ್ರ ಪ್ರತಿಷ್ಠಿತ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 45 ನೇ ಶ್ರೇಣಿಯನ್ನು ಪಡೆದಿದ್ದು. ಇದೀಗ  ಅವರು ಅಭಿನಂದನೆಗಳನ್ನು ಸ್ವೀಕರಿಸುವಲ್ಲಿ ನಿರತರಾಗಿದ್ದಾರೆ.

2018 ರ ಬ್ಯಾಚ್‌ನ ಐಐಟಿ ದಿಲ್ಲಿಯ ಪದವೀಧರ ಅನಿಲ್ ಬೋಸಾಕ್ ತನ್ನ ಮೂರನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಬಿಹಾರದ ಕಿಶನ್ ಗಂಜ್ ಜಿಲ್ಲೆಯವರು.

“ಮಗ ಮೊದಲು ಐಐಟಿಗೆ ಅರ್ಹತೆ ಪಡೆದಾಗ ನಮಗೆ ತುಂಬಾ ಸಂತೋಷವಾಗಿತ್ತು. ಅವನು ಈಗ ಕೆಲಸಕ್ಕೆ ಸೇರಬಹುದು ಎಂದು ನಾನು ಭಾವಿಸಿದ್ದೆ. ಆದರೆ ಆತ ಯುಪಿಎಸ್‌ಸಿಗೆ ಸಿದ್ಧನಾಗುತ್ತೇನೆ ಎಂದು ಹೇಳಿದ. ಅವನ ಶಿಕ್ಷಕರು ಸಹ ಅವನಿಗೆ ಸಾಕಷ್ಟು ಸಹಾಯ ಮಾಡಿದರು.  ಅವರು ಹಣದ ಸಹಾಯವನ್ನೂ ನೀಡಿದರು''ಎಂದು ಸೈಕಲ್ ನಲ್ಲಿ  ಬಟ್ಟೆ ಮಾರಿ ಜೀವನ ಸಾಗಿಸುತ್ತಿರುವ  ಅನಿಲ್ ಅವರ ತಂದೆ ಬಿನೋದ್ ಬೋಸಾಕ್ ಹೇಳಿದರು,

" ಇದು ತುಂಬಾ ಕಷ್ಟಕರವಾಗಿತ್ತು (ಆರಂಭದಲ್ಲಿ). ಇದು ಕನಸು ಎಂದು ನಾನು ಭಾವಿಸುತ್ತೇನೆ. ನಾನು ವಿದ್ಯಾವಂತನಲ್ಲ. ನಿಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡದರೆ ಅವರು ಯಶಸ್ಸು ಕಾಣುತ್ತಾರೆ ಎಂದು ಒತ್ತಿ ಹೇಳಿದರು.

"ನಾವು ತುಂಬಾ ಸಂತೋಷವಾಗಿದ್ದೇವೆ. ಕಳೆದ ವರ್ಷ ಅವನು  616 ರ್ಯಾಂಕ್ ಪಡೆದಿದ್ದ. ತಾನು ಮತ್ತೆ ಪರೀಕ್ಷೆಯಲ್ಲಿ ಹಾಜರಾಗುತ್ತೇನೆ ಎಂದ.  ಈ ಬಾರಿ 45 ನೇ ರ್ಯಾಂಕ್ ಪಡೆದಿದ್ದಾನೆ. ಆತ ಇಷ್ಟು ದೂರ ಬಂದಿರುವುದು ನಮಗೆ ಆಶ್ಚರ್ಯ ತಂದಿದೆ ... ಇದು ಇಡೀ ಜಿಲ್ಲೆಗೆ ಒಂದು ಉತ್ತಮ ಕ್ಷಣವಾಗಿದೆ'' ಎಂದು ಅನಿಲ್ ಸಹೋದರ ಬಾಬುಲ್ ಬೋಸಾಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News