ನ. 1ಕ್ಕೆ ಸಮಸ್ತ ಮದರಸಗಳು ಪ್ರಾರಂಭ

Update: 2021-09-25 16:09 GMT

ಚೇಳಾರಿ: ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ನವೆಂಬರ್ ಒಂದಕ್ಕೆ ಮದರಸಾಗಳನ್ನು ಪ್ರಾರಂಭಿಸಲು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್  ಕಾರ್ಯಕಾರಿ ಸಮಿತಿ ಸಭೆ  ನಿರ್ಧರಿಸಿದೆ.  ಕೋವಿಡ್ -19 ನಿಯಂತ್ರಣಗಳ ಹಿನ್ನೆಲೆಯಲ್ಲಿ  2020 ಮಾರ್ಚ್ 10 ರಿಂದ ಮುಚ್ಚಲ್ಪಟ್ಟಿರುವ ಮದರಸಾಗಳು ನವೆಂಬರ್ 1 ರಿಂದ ತೆರೆದು ಕಾರ್ಯಾಚರಿಸಲಿದೆ.

ಸಮಸ್ತ ಶಿಕ್ಷಣ ಮಂಡಳಿಯ ಅಧೀನದಲ್ಲಿ ಹತ್ತು ಸಾವಿರದ ಮುನ್ನೂರ ಹದಿನಾರು (10316) ಮದರಸಗಳು ಕಾರ್ಯನಿರ್ವಹಿಸುತ್ತಿವೆ.  ಒಂದೂವರೆ ವರ್ಷದಿಂದ ಆನ್‌ಲೈನ್ ತರಗತಿಗಳ ಮೂಲಕ ಶಿಕ್ಷಣವನ್ನು ಪಡೆಯುತ್ತಿದ್ದ 12 ಲಕ್ಷ ವಿದ್ಯಾರ್ಥಿಗಳು ನವೆಂಬರ್ 1 ರಿಂದ ಆಫ್‌ಲೈನ್‌ನಲ್ಲಿ ಅಧ್ಯಯನ ಮಾಡಲು ಸಿದ್ಧತೆ ನಡೆಸಿದ್ದಾರೆ.  ಮದರಸಾಗಳನ್ನು ತೆರೆಯುವ ಮುನ್ನ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮದ್ರಸ ಆಡಳಿತ ಸಮಿತಿಗಳಿಗೆ ಸಭೆ ನಿರ್ದೇಶಿಸಿದೆ.

ಮದರಸಾಗಳಲ್ಲಿ ಅಗತ್ಯ ನಿರ್ವಹಣೆ ಮಾಡಬೇಕು.  ತರಗತಿಗಳು ಮತ್ತು ಸುತ್ತಮುತ್ತಲಿನ ಪರಿಸರಗಗಳನ್ನು ಸ್ವಚ್ಛವಾಗಿಡಬೇಕು. ತರಗತಿ ಗಳನ್ನು ನಡೆಸಲು ಸಾಕಷ್ಟು ಅಧ್ಯಾಪಕರ ಉಪಸ್ಥಿತಿಯನ್ನು ಖಚಿತಪಡಿಸಿ ಕೊಳ್ಳಬೇಕು.  ಸರ್ಕಾರ ಸೂಚಿಸಿದ ಕೋವಿಡ್ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಅನುಸರಿಸಬೇಕು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.  ಕೋವಿಡ್ ಸೋಂಕಿತರು ಅಥವಾ ರೋಗಲಕ್ಷಣಗಳನ್ನು ಹೊಂದಿರುವವರು ತರಗತಿಗಳಿಗೆ ಹಾಜರಾಗುವುದನ್ನು ತಪ್ಪಿಸಬೇಕು. ಅಂತಹ ವಿದ್ಯಾರ್ಥಿಗಳು ತಮ್ಮ ಆನ್‌ಲೈನ್ ಅಧ್ಯಯನವನ್ನು ಮನೆಯಲ್ಲಿಯೇ ಮುಂದುವರಿಸಬಹುದು.

ಮದರಸಾ ಆಡಳಿತ ಸಮಿತಿಯವರು ಗ್ರಹ ಸಂದರ್ಶನ ಮಾಡಿ ಅಗತ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವಂತೆ ಸೂಚಿಸಲಾಗಿದೆ.  ಮದರಸಾ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಮತ್ತು ಜಂಇಯತುಲ್ ಮುಅಲ್ಲಿಮೀನ್‌ಗಳ ಜಿಲ್ಲಾಮಟ್ಟದ ಜಂಟಿ ಸಭೆಗಳನ್ನು ಅಕ್ಟೋಬರ್ 10 ರ ಒಳಗೆ ಮತ್ತು ರೇಂಜ್  ಮಟ್ಟದಲ್ಲಿ ಅಕ್ಟೋಬರ್ 25 ರೊಳಗೆ ನಡೆಸಿ ಮದರಸಾಗಳನ್ನು ತೆರೆಯಲು ಅಗತ್ಯವಾದ ಸಿದ್ಧತೆಗಳನ್ನು ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿ ಎಂ.ಟಿ  ಅಬ್ದುಲ್ಲಾ ಮುಸ್ಲಿಯಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News