ಉಡುಪಿ ವಕ್ಫ್ ಕಚೇರಿ ಸ್ಥಳಾಂತರ

Update: 2021-09-25 16:34 GMT

ಉಡುಪಿ : ಮಣಿಪಾಲ ರಾಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಈವರೆಗೆ ಕಾರ್ಯನಿರ್ವಹಿಸುತ್ತಿದ್ದ ಉಡುಪಿ ಜಿಲ್ಲಾ ವಕ್ಫ್ ಕಚೇರಿಯು ಇಂದು ಮಣಿಪಾಲದ ಅಲೆವೂರು ರಸ್ತೆಯ ಪಶು ಚಿಕಿತ್ಸಾಲಯ ಹತ್ತಿರ ಇರುವ ಮೌಲಾನಾ ಆಜಾದ್ ಭವನದ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ಸೆ.27ರಿಂದ ವಕ್ಫ್ ಕಚೇರಿ ಈ ಭವನದಲ್ಲಿ ಎಂದಿನಂತೆ ಕೆಲಸ ಕಾರ್ಯ ನಿರ್ವಹಿಸಲಿದೆ. ಆದುದರಿಂದ ಎಲ್ಲಾ ವಕ್ಫ್ ಸಂಸ್ಥೆಗಳು ಹಾಗೂ ಸಾರ್ವಜನಿಕರು ಬದಲಾದ ವಿಳಾಸಕ್ಕೆ ತಮ್ಮ ಕೆಲಸ ಕಾರ್ಯಗಳಿಗೆ ಸಂಪರ್ಕಿಸಬೇಕು ಎಂದು ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News