ಕೃಷಿ ಕಾಯ್ದೆ ವಿರೋಧಿಗಳಿಂದ ಗೊಂದಲ: ಸಚಿವ ಕೋಟ

Update: 2021-09-25 16:37 GMT

ಉಡುಪಿ, ಸೆ.25: ಸೋಮವಾರ ಕರೆ ನೀಡಿರುವ ಭಾರತ ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷ ಸಮಾಜಮುಖಿ ಕಾರ್ಯಕ್ಕೆ ಮಾನ್ಯತೆ ಕೊಡುತ್ತದೆ ಎಂದು ಹೇಳಿದ್ದಾರೆ.

ದಲ್ಲಾಳಿಗಳಿಂದ ಕೃಷಿಕರನ್ನು ಮುಕ್ತ ಮಾಡುವುದೇ ಎಪಿಎಂಸಿ ಕೃಷಿ ಬಿಲ್ ಕಾಯ್ದೆಯ ಉದ್ದೇಶ. ರೈತರ ಬೆಂಬಲಕ್ಕೆ ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಆದರೆ ವಿರೋಧಿಗಳು ಗೊಂದಲವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲ ಗೊಂದಲಗಳಿಗೆ ಉತ್ತರ ಕೊಡುವ ಶಕ್ತಿ ಸಾಮರ್ಥ್ಯ ಬಿಜೆಪಿ ಮತ್ತು ಕೇಂದ್ರ ಸರಕಾರಕ್ಕೆ ಇದೆ ಎಂದರು.

ದಲ್ಲಾಳಿಗಳಿಂದ ಕೃಷಿಕರನ್ನು ಮುಕ್ತ ಮಾಡುವುದೇ ಎಪಿಎಂಸಿ ಕೃಷಿ ಬಿಲ್ ಕಾಯ್ದೆಯ ಉದ್ದೇಶ. ರೈತರ ಬೆಂಬಲಕ್ಕೆ ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಆದರೆ ವಿರೋಧಿಗಳು ಗೊಂದಲವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲ ಗೊಂದಲಗಳಿಗೆ ಉತ್ತರ ಕೊಡುವ ಶಕ್ತಿ ಸಾಮರ್ಥ್ಯ ಬಿಜೆಪಿ ಮತ್ತು ಕೇಂದ್ರ ಸರಕಾರಕ್ಕೆ ಇದೆ ಎಂದರು. ರಾಜ್ಯದಲ್ಲಿ ಗೋ ಹತ್ಯೆ ನಿಷೇದ ಕಾಯಿದೆ ಜಾರಿಯಲ್ಲಿದೆ. ಗೋಶಾಲೆಗಳನ್ನು ಜಿಲ್ಲೆ ಮತ್ತು ತಾಲೂಕಿನಲ್ಲಿ ತೆರೆಯಲಾಗುತ್ತದೆ. ಪಶು ಸಂಗೋಪನ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.ಗೋವುಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಗೋವು ರಕ್ಷಣೆಯಲ್ಲಿ ಅಧಿಕಾರಿಗಳು ಲೋಪ ಮಾಡಿದ್ದರೆ ಅದನ್ನು ಸರಿ ಮಾಡುತ್ತೇವೆ ಎಂದು ಸಚಿವ ಕೋಟ ನುಡಿದರು.

ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಮಾಡುವಲ್ಲಿ ಲೋಪವಾಗ ಬಾರದು.ಗೋಹತ್ಯೆ ಆದೇಶವನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತನ್ನಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಚಿವ ರು ತಾಕೀತು ಮಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News