ಶಿಕ್ಷಣ ನೀತಿ ತಡೆಯಲು ಕಾಂಗ್ರೆಸ್‌ನ ಕನಸು-ಮನಸಿನಲ್ಲೂ ಸಾಧ್ಯವಿಲ್ಲ: ಡಾ.ಅಶ್ವತ್ಥ ನಾರಾಯಣ

Update: 2021-09-25 17:20 GMT

ಉಡುಪಿ, ಸೆ.25: ರಾಷ್ಟ್ರೀಯ ಶಿಕ್ಷಣ ನೀತಿ ತಡೆಯಲು ಕಾಂಗ್ರೆಸ್ ಪಕ್ಷದವರ ಕನಸು-ಮನಸಿನಲ್ಲೂ ಸಾಧ್ಯವಿಲ್ಲ. ಇದು ಜನರಿಗೋಸ್ಕರ ಮಾಡಿರುವ ಶಿಕ್ಷಣ ನೀತಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ನೀತಿಯಲ್ಲಿ ಏನು ನ್ಯೂನ್ಯತೆ ಇದೆ ಹೇಳಲಿ. ಶಿಕ್ಷಣತಜ್ಞ, ಶಿಕ್ಷಣ ಸಂಸ್ಥೆಯ ಮಾಲಕರು ಅಂತ ಹೇಳುತ್ತಾರೆ. ಎಲ್ಲಾ ಬರೀ ಬುರುಡೆ. ಒಳ್ಳೇದು ಮಾಡೋಕು ಗೊತ್ತಿಲ್ಲ ಮಾಡೋದಕ್ಕೂ ಬಿಡಲ್ಲ. ಬಿಜೆಪಿ ಹತ್ತಿರ ಇದೆಲ್ಲ ನಡೆಯುವುದಿಲ್ಲ. ಜನ ನಮಗೆ ಕೆಲಸ ಮಾಡುವ ಅಧಿಕಾರ ಕೊಟ್ಟಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ ಎಂದರು.

ಭಾರತ್ ಬಂದ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಪಂಜಾಬಿ ಗರು ನಡೆಸುತ್ತಿರುವ ಹೋರಾಟದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಜನಪರವಾದ ಕಾಳಜಿ ಇಲ್ಲದ ವ್ಯಾಪಾರಿಗಳು ಹೋರಾಟ ಮಾಡುತ್ತಿದ್ದಾರೆ. ಕೃಷಿ ಬಿಲ್ ಸರಕಾರ ಮಾಡಿರುವ ದೊಡ್ಡ ಸುಧಾರಣೆ. ರೈತರು ವ್ಯಾಪಾರಿಗಳ ಕೈಯಲ್ಲಿ ಸಿಲುಕಿಕೊಂಡು ಕಷ್ಟಪಡುತ್ತಿದ್ದರು. ಇದರಿಂದ ರೈತರಿಗೆ ಸ್ವಾತಂತ್ರ ಸಿಕ್ಕಂತಾಗಿದೆ. ರೈತರಿಗೆ ಉತ್ತಮವಾದ ಮಾರುಕಟ್ಟೆ ಸಿಗಲಿದೆ ಎಂದು ಹೇಳಿದರು.

ರೈತರು ಸರಕಾರದ ಸಬ್ಸಿಡಿ- ಸಹಾಯ ಬೇಡ, ಬೆಳೆಗೆ ಬೆಲೆ ಕೊಡಿ ಎಂದು ಹೇಳುತ್ತಾರೆ. ಕಾಂಗ್ರೆಸ್ 73 ವರ್ಷಗಳ ಹಳೆಯ ಸುಧಾರಣೆಗಳನ್ನು ಜನ ನೋಡಿ ದ್ದಾರೆ. ರೈತರ ಸುಧಾರಣೆ ಮಾಡದಿದ್ದರೆ ನಮಗೆ ಮತ ಬೀಳುತ್ತಾ? ರೈತರಿಗೆ ವಿರುದ್ಧವಾಗಿದ್ದರೆ ಚುನಾವಣೆಗೆ ಹೋಗಲು ಆಗುತ್ತಾ? ಯಾವುದೇ ಪ್ರತಿಭಟನೆ ನಡೆದರೆ ಅದು ರೈತ ವಿರೋಧಿಯಾಗುತ್ತದೆ. ಪ್ರತಿಭಟನೆ ಮಾಡುವವರು ರೈತ ವಿರೋಧಿಗಳು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News