ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿರುವ ಮಕ್ಕಳಿಗಾಗಿ ಕೇರಳದಲ್ಲಿ ಡಿಜಿಟಲ್ ಡಿ-ಅಡಿಕ್ಷನ್ ಕೇಂದ್ರ

Update: 2021-09-25 18:17 GMT

ತಿರುವನಂತಪುರ: ಒಂದು ಪ್ರಮುಖ ಮಕ್ಕಳ ಸ್ನೇಹಿ ಉಪಕ್ರಮವೊಂದರಲ್ಲಿ ರಾಜ್ಯದಲ್ಲಿ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಅವರು ಶನಿವಾರ 'ಡಿಜಿಟಲ್ ಡಿ-ಅಡಿಕ್ಷನ್ ಸೆಂಟರ್' ಗಳನ್ನು ಘೋಷಿಸಿದರು.

ಇನ್ನೂ 20 ಪೊಲೀಸ್ ಠಾಣೆಗಳನ್ನು 'ಮಕ್ಕಳ ಸ್ನೇಹಿ' ಎಂದು ವಿಜಯನ್ ಪ್ರಕಟಿಸಿದರು. ಇದೀಗ  ದಕ್ಷಿಣ ರಾಜ್ಯದಲ್ಲಿ ಒಟ್ಟು 126 ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳಿವೆ.

ಪೊಲೀಸ್ ಇಲಾಖೆಯ ಅಡಿಯಲ್ಲಿ ಹೊಸದಾಗಿ ನಿರ್ಮಿಸಿದ ಅಥವಾ ನವೀಕರಿಸಿದ ಕಟ್ಟಡಗಳನ್ನು ಆನ್‌ಲೈನ್ ಮೂಲಕ ಉದ್ಘಾಟಿಸುವಾಗ ವಿಜಯನ್ ಈ ಮಹತ್ವದ ಘೋಷಣೆಗಳನ್ನು ಮಾಡಿದರು.

"ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪೊಲೀಸರ ಸೂಚನೆ ಮೇರೆಗೆ ಡಿಜಿಟಲ್ ಡಿ-ಅಡಿಕ್ಷನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು" ಎಂದು ಪೊಲೀಸ್ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ವಿವರಿಸುವಾಗ ಸಿಎಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News