ರೈತರ ಪ್ರತಿಭಟನೆ: ಉತ್ತರಪ್ರದೇಶ-ಘಾಝಿಪುರ ವಾಹನ ಸಂಚಾರವನ್ನು ಮುಚ್ಚಿದ ದಿಲ್ಲಿ ಪೊಲೀಸರು

Update: 2021-09-27 06:17 GMT
photo:ANI

ಉತ್ತರಪ್ರದೇಶ-ಘಾಝಿಪುರ ವಾಹನ  ಸಂಚಾರವನ್ನು ಮುಚ್ಚಿದ ದಿಲ್ಲಿ ಪೊಲೀಸರು

ಹೊಸದಿಲ್ಲಿ: ದಿಲ್ಲಿ  ಪೊಲೀಸರು ಸೋಮವಾರ ಭಾರತ್ ಬಂದ್ ಅನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದಿಂದ ಘಾಝಿಪುರ ಕಡೆಗೆ ಸಂಚಾರವನ್ನು ಮುಚ್ಚಿದ್ದಾರೆ.

"ಪ್ರತಿಭಟನೆಯಿಂದಾಗಿ ಉತ್ತರಪ್ರದೇಶದಿಂದ ಘಾಝಿಪುರ ಕಡೆಗೆ ವಾಹನ ಸಂಚಾರವನ್ನು ಮುಚ್ಚಲಾಗಿದೆ" ಎಂದು ದಿಲ್ಲಿ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ ಕೆಎಂ ಮೂರು ಕೃಷಿ ಕಾನೂನುಗಳ ಜಾರಿಯ ಮೊದಲ ವಾರ್ಷಿಕೋತ್ಸವದ ನಿಮಿತ್ತ ಇಂದು ಭಾರತ್ ಬಂದ್ ಗೆ ಕರೆ ನೀಡಿದೆ.

ಭಾರತ್ ಬಂದ್ ಗೆ 500 ಕ್ಕೂ ಹೆಚ್ಚು ರೈತ ಸಂಘಟನೆಗಳು, 15 ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಆರು ರಾಜ್ಯ ಸರಕಾರಗಳು ಹಾಗೂ  ಸಮಾಜದ ವಿವಿಧ ವಿಭಾಗಗಳಿಂದ ಬೆಂಬಲ ವ್ಯಕ್ತವಾಗಿದೆ..

ಭದ್ರತಾ ತಪಾಸಣೆಯ ನಡುವೆ ದಿಲ್ಲಿ-ಗುರ್ಗಾಂವ್ ಗಡಿಯಲ್ಲಿ ಸಂಚಾರ ದಟ್ಟಣೆ

ಹೊಸದಿಲ್ಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೋರಿ ಇಂದು ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ಪ್ರವೇಶಿಸುವ ವಾಹನಗಳನ್ನು ದಿಲ್ಲಿ ಪೊಲೀಸರು ಮತ್ತು ಅರೆಸೇನಾಪಡೆ ಯೋಧರು ತಪಾಸಣೆ ನಡೆಸುತ್ತಿರುವ ಕಾರಣ  ಗುರುಗ್ರಾಮ-ದಿಲ್ಲಿ ಗಡಿಯಲ್ಲಿ ಭಾರೀ ಸಂಚಾರ ದಟ್ಟಣೆ ಕಂಡುಬಂದಿದೆ.

ಪಂಜಾಬ್-ಹರ್ಯಾಣದಲ್ಲಿ ಹೆದ್ದಾರಿ, ರೈಲು ಹಳಿಗಳನ್ನು ತಡೆದ ರೈತರು

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ರೈತರು  ಭಾರತ್ ಬಂದ್ ಬೆಂಬಲವಾಗಿ ಅಮೃತಸರದ ದೇವಿದಾಸ್ ಪುರದ ಗ್ರಾಮದ ರೈಲ್ವೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

ರೈತರು 20 ಅಧಿಕ ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿರುವ ಕಾರಣ ದಿಲ್ಲಿ, ಅಂಬಾಲ ಹಾಗೂ ಫಿರೋಝಪುರ ವಿಭಾಗದಲ್ಲಿ ರೈಲು ಸಂಚಾರಕ್ಕೆ ಧಕ್ಕೆಯಾಗಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ.

ಕ್ರಾಂತಿಕಾರಿ ಕಿಸಾನ್ ಯೂನಿಯನ್ ಪಟಿಯಾಲದ ಬಥಿಂಡಾ-ಸಂಗ್ರೂರ್ ರಸ್ತೆಯನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News