ಗುಲಾಬ್ ಚಂಡಮಾರುತ: ಮೂವರು ಮೃತ್ಯು

Update: 2021-09-27 08:22 GMT
photo: AP

ಹೊಸದಿಲ್ಲಿ:ಗುಲಾಬ್ ಚಂಡಮಾರುತವು ಎರಡು ರಾಜ್ಯಗಳ ಕರಾವಳಿ ಪ್ರದೇಶದಲ್ಲಿ ರವಿವಾರ ಸಂಜೆ ಅಪ್ಪಳಿಸಿದ ಕಾರಣ ಒಡಿಶಾ ಹಾಗೂ  ಆಂಧ್ರಪ್ರದೇಶದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಓರ್ವ ವ್ಯಕ್ತಿ ಕೊಚ್ಚಿ ಹೋಗಿದ್ದು,ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡಿದ್ದಾರೆ.ಇನ್ನೊಬ್ಬ ನಾಪತ್ತೆಯಾಗಿದ್ದಾನೆ. ರವಿವಾರ ಸಂಜೆ ಚಂಡಮಾರುತ ಅಪ್ಪಳಿಸಿತು.

 "ರಾತ್ರಿ 8.30 ಕ್ಕೆ ಭೂಕುಸಿತವಾದ ನಂತರ ಚಂಡಮಾರುತವು ಕೋರಾಪುಟ್ ಹಾಗೂ ಮಲ್ಕನಗಿರಿ ಜಿಲ್ಲೆಗಳತ್ತ ಚಲಿಸುತ್ತಿದೆ. ಅಲ್ಲಿ ಗಾಳಿ ಮತ್ತು ಮಳೆಯಿಂದ ಸಂಭಾವ್ಯ ಹಾನಿಯುಂಟಾಗುವ ನಿರೀಕ್ಷೆಯಿದೆ. ನಾವು ನಾಳೆ ಮಧ್ಯಾಹ್ನದವರೆಗೆ ಮಲ್ಕನಗಿರಿ, ಕೊರಪುಟ್, ಗಂಜಮ್, ಗಜಪತಿ ಮತ್ತು ರಾಯಗಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ನಿರೀಕ್ಷೆಯಲ್ಲಿದ್ದೇವೆ. ಬೇರೆ ಯಾವುದೇ ಕರಾವಳಿ ಜಿಲ್ಲೆಗಳಿಗೆ ಯಾವುದೇ ಅಪಾಯವಿಲ್ಲ'' ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪ್ರದೀಪ್ ಜೆನಾ  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News