ಅಕ್ಟೋಬರ್ 30 ರಂದು ಮೂರು ಲೋಕಸಭೆ, 30 ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ: ಚುನಾವಣಾ ಆಯೋಗ

Update: 2021-09-28 05:24 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಮೂರು ಲೋಕಸಭಾ ಸ್ಥಾನಗಳು ಹಾಗೂ  ವಿವಿಧ ರಾಜ್ಯಗಳಲ್ಲಿ ಹರಡಿಕೊಂಡಿರುವ 30 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಕ್ಟೋಬರ್ 30 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ.

ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ.

"ಆಯೋಗವು ಕೊರೋನ ಸಾಂಕ್ರಾಮಿಕ, ಪ್ರವಾಹ, ಹಬ್ಬಗಳು, ಕೆಲವು ಪ್ರದೇಶಗಳಲ್ಲಿನ ಶೀತ ಪರಿಸ್ಥಿತಿಗಳು, ಸಂಬಂಧಿಸಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದೆ ಹಾಗೂ  ಎಲ್ಲಾ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿದೆ. ಕೇಂದ್ರಾಡಳಿತ ಪ್ರದೇಶ ದಾದ್ರಾ-ನಗರ್ ಹವೇಲಿ ಹಾಗೂ ಡಮನ್ ಹಾಗೂ ಡಿಯು, ಮಧ್ಯಪ್ರದೇಶ ಹಾಗೂ ಹಿಮಾಚಲಪ್ರದೇಶದಲ್ಲಿ ಖಾಲಿ ಇರುವ ಮೂರು ಸಂಸದೀಯ ಕ್ಷೇತ್ರಗಳಿಗೆ ಹಾಗೂ ವಿವಿಧ ರಾಜ್ಯಗಳ ತೆರವಾಗಿರುವ 30 ವಿಧಾನಸಭಾ ಕ್ಷೇತ್ರಗಳಲ್ಲಿ  ಚುನಾವಣೆ ನಡೆಸಲಾಗುವುದು  ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಅ. 30 ರಂದು ಉಪ ಚುನಾವಣೆ ಘೋಷಿಸಲಾಗಿದೆ.

ಕರ್ನಾಟಕ(2 ಸ್ಥಾನ), ಆಂಧ್ರಪ್ರದೇಶ(1 ಸ್ಥಾನ), ಅಸ್ಸಾಂ(5 ಸ್ಥಾನ), ಬಿಹಾರ(2 ಸ್ಥಾನ), ಹರ್ಯಾಣ(1), ಹಿಮಾಚಲಪ್ರದೇಶ(3 ಸ್ಥಾನ), ಮಧ್ಯಪ್ರದೇಶ(3 ಸ್ಥಾನ), ಮಹಾರಾಷ್ಟ್ರ(1 ಸ್ಥಾನ), ಮೇಘಾಲಯ(3 ಸ್ಥಾನ), ಮಿಝೋರಾಂ(1 ಸ್ಥಾನ), ನಾಗಾಲ್ಯಾಂಡ್(1), ರಾಜಸ್ಥಾನ(2 ಸ್ಥಾನ), ತೆಲಂಗಾಣ(1 ಸ್ಥಾನ), ಪಶ್ಚಿಮಬಂಗಾಳ(4 ಸ್ಥಾನ)ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News