ಮಮತಾ ಬ್ಯಾನರ್ಜಿ ಸ್ಫರ್ಧಿಸಲಿರುವ ಉಪಚುನಾವಣೆ ವಜಾಗೊಳಿಸಲು ಸಾಧ್ಯವಿಲ್ಲ: ಹೈಕೋರ್ಟ್

Update: 2021-09-28 07:24 GMT

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಯಾಗಿರುವ ಭಬಾನಿಪುರ ಉಪಚುನಾವಣೆಯನ್ನು ರದ್ದುಗೊಳಿಸಲಾಗುವುದಿಲ್ಲ ಎಂದ ಕಲ್ಕತ್ತಾ ಹೈಕೋರ್ಟ್ ಇಂದು ಉಪಚುನಾವಣೆಯ ವಿರುದ್ಧದ ಮನವಿಯನ್ನು ವಜಾಗೊಳಿಸಿದೆ. ಗುರುವಾರ ಯೋಜಿಸಿದಂತೆ ಉಪಚುನಾವಣೆ ನಡೆಯಲಿದೆ ಎಂದು ನ್ಯಾಯಾಲಯ ಹೇಳಿದೆ.

ಕೋಲ್ಕತ್ತಾದ ಭಬಾನಿಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲು "ಸಾಂವಿಧಾನಿಕ ತುರ್ತುಸ್ಥಿತಿ" ಯ ಚುನಾವಣಾ ಆಯೋಗದ ವಾದವನ್ನು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಪ್ರಶ್ನಿಸಿತ್ತು.

ಚುನಾವಣಾ ಆಯೋಗವು, ಅರ್ಜಿದಾರರು ಸಾಂವಿಧಾನಿಕ ತುರ್ತುಸ್ಥಿತಿ ಎಂಬ ಪದದ ಅರ್ಥವನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದು, ಇದು ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನವಲ್ಲ ಎಂದು ಒತ್ತಿಹೇಳಿತ್ತು.

ನ್ಯಾಯಾಲಯವು ಇಂದು ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿಯವರು ಉಪಚುನಾವಣೆಯನ್ನು ನಡೆಸುವಂತೆ ಒತ್ತಾಯಿಸಿ ಬರೆದ ಪತ್ರವನ್ನು "ಸೂಕ್ತವಲ್ಲ" ಎಂದು ಕರೆದಿದೆ.

2011 ಮತ್ತು 2016 ರಲ್ಲಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುತ್ತಿದ್ದ ಭಬಾನಿಪುರ ಕ್ಷೇತ್ರಕ್ಕೆ ಟಿಎಂಸಿ ಶಾಸಕ ಸೋವಂದೇಬ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡಿದ ನಂತರ ಉಪಚುನಾವಣೆ ಅಗತ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News