ಜಮ್ಮು- ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿಗೆ ಮತ್ತೆ ಗೃಹ ಬಂಧನ

Update: 2021-09-29 07:36 GMT

ಶ್ರೀನಗರ: ತಾನು ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಭೇಟಿ ನೀಡಲು ಯೋಜಿಸಿದ್ದರಿಂದ ತನ್ನನ್ನು ಮತ್ತೆ ಗೃಹಬಂಧನದಲ್ಲಿರಿಸಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ.

''ಪುಲ್ವಾಮಾದ ಟ್ರಾಲ್ ಪಟ್ಟಣದ  ಯಾಗವಾಣಿ ಶಿಬಿರದ ಸೇನಾ ಸಿಬ್ಬಂದಿ ನಿನ್ನೆ ರಾತ್ರಿ ಹಳ್ಳಿಯೊಂದರ ಮನೆಗಳಿಗೆ ನುಗ್ಗಿ ನಿರ್ದಯವಾಗಿ ಒಂದು ಕುಟುಂಬವನ್ನು ಥಳಿಸಿದರು. ಮಹಿಳಾ ಸದಸ್ಯೆಯನ್ನು ತೀವ್ರವಾಗಿ ಗಾಯಗೊಳಿಸಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಳ್ಳಿಯ ನಾಗರಿಕರಿಗೆ ಸೈನಿಕರು ಥಳಿಸಿರುವುದು  ಇದೇ ಮೊದಲಲ್ಲ’’ ಎಂದು ಮುಫ್ತಿ ಮಂಗಳವಾರ ಟ್ವೀಟಿಸಿದ್ದರು.

ಮುಫ್ತಿ ಅವರು ಬುಧವಾರ ಕುಟುಂಬವನ್ನು ಭೇಟಿ ಮಾಡುವುದಾಗಿ ಹೇಳಿದರು.

"ಸೇನೆಯಿಂದ ದೌರ್ಜನ್ಯಕ್ಕೊಳಗಾದ ಟ್ರಾಲ್ ಹಳ್ಳಿಗೆ ಭೇಟಿ ನೀಡಲು ಪ್ರಯತ್ನಿಸಿದ್ದಕ್ಕಾಗಿ ಇಂದು ಮತ್ತೆ ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ. ಇದು ಕಾಶ್ಮೀರದ ನೈಜ ಚಿತ್ರವಾಗಿದ್ದು ಭೇಟಿ ನೀಡುವ ಗಣ್ಯರಿಗೆ ಇದನ್ನು ತೋರಿಸಬೇಕು’’  ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News