ಉ.ಪ್ರ: ಹದಿಹರೆಯದ ಪ್ರೇಮಿಗಳಿಗೆ ಚಪ್ಪಲಿ ಹಾರ ತೊಡಿಸಿ ಮೆರವಣಿಗೆ
Update: 2021-09-29 23:34 IST
ಲಕ್ನೋ, ಸೆ.29: ಪರಸ್ಪರ ಪ್ರೇಮದ ಸುಳಿಯಲ್ಲಿ ಸಿಲುಕಿದ್ದ ಹದಿಹರೆಯದ ಜೋಡಿಯ ಕುತ್ತಿಗೆಗೆ ಚಪ್ಪಲಿ ಹಾರಗಳನ್ನು ತೊಡಿಸಿ,ಮುಖಗಳಿಗೆ ಕಪ್ಪುಬಣ್ಣ ಬಳಿದು ಮೆರವಣಿಗೆ ಮಾಡಿದ ಘಟನೆ ಮಂಗಳವಾರ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಗೌರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕನ ತಾಯಿಯ ದೂರಿನ ಮೇರೆಗೆ 13 ಜನರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದೊಂದು ದುರದೃಷ್ಟಕರ ಘಟನೆ. ಜೋಡಿ ಒಂದೇ ಸಮುದಾಯಕ್ಕೆ ಸೇರಿದ್ದಾಗಿದೆ. ದುಷ್ಕಮಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ ಪಾಲ್ಗೊಂಡ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಎಸ್ಪಿ ದೀಪೇಂದ್ರ ಚೌಧರಿ ತಿಳಿಸಿದರು.