ಕೆಸಿಎಫ್ ಒಮನ್: 'ಸಾಂತ್ವನ ಸಸಿ - 2021' ಯೋಜನೆಗೆ ಚಾಲನೆ

Update: 2021-09-30 11:00 GMT

ಒಮನ್ : ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ವತಿಯಿಂದ ನಡೆಸಲುದ್ದೇಶಿಸಿದ ಯೋಜನೆ 'ಸಸಿ-2021'ಗೆ ಸಯ್ಯಿದತ್ ಮಣವಾಟಿ ಬೀವಿ (ರ) ಪೊಯ್ಯತ್ತಬೈಲ್ ದರ್ಗಾದಲ್ಲಿ ಚಾಲನೆ ನೀಡಲಾಯಿತು.

ಕೆಸಿಎಫ್ ಸದಸ್ಯರಾಗಿ, ಕೊರೋನ ಕಾರಣದಿಂದ ಗಲ್ಫ್ ನಲ್ಲಿ  ಉದ್ಯೋಗ ಕಳೆದು ಕೊಂಡು ಇದೀಗ ಊರಿನಲ್ಲಿ ರುವ ಕೆಸಿಎಫ್ ಒಮನ್ ಸದಸ್ಯರಿಗೆ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಫುಡ್ ಕಿಟ್ಟ್ ವಿತರಣೆ ಮಾಡುವ ಮೂಲಕ  ಸಾಂತ್ವನ ಸಸಿ ಎಂಬ ಕಾರ್ಯಕ್ರಮಕ್ಕೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರು ಹಾಗೂ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಎಸ್ ವೈಎಸ್ ಪೊಯ್ಯತ್ತಬೈಲ್ ಅಧ್ಯಕ್ಷ ಸಲಾಮ್ ಮದನಿ, ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿ ಸದಸ್ಯರಾದ ಝುಬೈರ್ ಸ ಅದಿ ಪಾಟ್ರಕೋಡಿ, ನವಾಝ್ ಮಣಿಪುರ , ಕೆಸಿಎಫ್ ಒಮನ್ ಸದಸ್ಯರಾದ‌ ಮುಸ್ತಫಾ ಮಲ್ಲೂರು, ಫಾರೂಕ್ ಕುಕ್ಕಾಜೆ, ಮುಕ್ತಾರ್, ಖಾಸಿಂ ಪೊಯ್ಯತ್ತಬೈಲ್ ಹಾಗೂ ಕೆಸಿಎಫ್, ಎಸ್ ವೈಎಸ್, ಎಸ್ಎಸ್ಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ಪ್ರೊತ್ಸಾಹ ವನ್ನು  ನೀಡಿದ  ಕೆಸಿಎಫ್ ಒಮನ್ ಅಧ್ಯಕ್ಷ ಆಯ್ಯೂಬ್ ಕೋಡಿ, ಸಂಘಟನಾ ಅಧ್ಯಕ್ಷ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ಕೊಡಗು,  ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ, ಕೋಶಾಧಿಕಾರಿ ಆರಿಫ್ ಕೋಡಿ, ಸಾಂತ್ವನ ವಿಭಾಗದ ಅಧ್ಯಕ್ಷ ಇಬ್ರಾಹಿಂ ಹಾಜಿ ಅತ್ರಾಡಿ ಹಾಗೂ ಕೆಸಿಎಫ್ ಒಮನ್ ರಾಷ್ಟ್ರೀಯ ಸಮಿತಿಯ ಸದಸ್ಯರು, ಝೋನ್ ಮತ್ತು ಸೆಕ್ಟರ್  ಸಮಿತಿ ಸದಸ್ಯರು ಹಾಗೂ ಸಹಾಯ ಸಹಕಾರ ನೀಡಿದ ಎಲ್ಲರಿಗೂ   ಕೃತಜ್ಞತೆಯನ್ನು ಅರ್ಪಿಸುತಿದ್ದೇವೆ  ಎಂದು ಸಾಂತ್ವನ ವಿಭಾಗದ  ಕಾರ್ಯದರ್ಶಿ ಇಕ್ಬಾಲ್ ಎರ್ಮಾಲ್ ಸೊಹಾರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News