ಕಾಟಿಪಳ್ಳ: ಬದ್ರಿಯಾ ಯೂತ್ ಕೌನ್ಸಿಲ್ ಅಧ್ಯಕ್ಷರಾಗಿ ಮುಸ್ತಫಾ ರೂಬಿ ಆಯ್ಕೆ

Update: 2021-10-01 03:05 GMT

ಕಾಟಿಪಳ್ಳ: 'ಬದ್ರಿಯಾ ಯೂತ್ ಕೌನ್ಸಿಲ್' ಸಂಘದ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಮುಖ್ಯ ಸಲಹೆಗಾರರು, ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಟ್ರಸ್ಟಿಯಾದ ಎಂ. ಅಬ್ದುಲ್ ಖಯ್ಯೂಮ್ ಅವರ ಅಧ್ಯಕ್ಷತೆಯಲ್ಲಿ ಕಾಟಿಪಳ್ಳ ಎಸ್ಡಿಪಿಐ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾದ ಇಲ್ಯಾಸ್ ಪಿಎಂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮೀರ್ ಅಹ್ಮದ್  ವಾರ್ಷಿಕ ವರದಿ ಮತ್ತು ಗತ ಅವಧಿಯ ಲೆಕ್ಕ ಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು. ಸಭೆಯಲ್ಲಿ ಮುಂದಿನ ಅವಧಿಗೆ ಮಹತ್ವದ ಯೋಜನೆಗಳನ್ನು ಜಾರಿಗೆ ತರಲು ತೀರ್ಮಾನಿಸಲಾಯಿತು. ಈ ಸಂದರ್ಭ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಪಧಾಧಿಕಾರಿಗಳ ವಿವರ:

ಮುಸ್ತಫಾ ರೂಬಿ (ಅಧ್ಯಕ್ಷರು)
ಶರೀಫ್ ಅಚ್ಚಾಕ ಮತ್ತು ನಾಸಿರ್ (ಉಪಾಧ್ಯಕ್ಷರು)
ಇಲ್ಯಾಸ್ ಪಿ.ಎಂ (ಗೌರವಾಧ್ಯಕ್ಷರು)
ಅಮೀರ್ ಅಹ್ಮದ್ (ಪ್ರಧಾನ ಕಾರ್ಯದರ್ಶಿ)
ತನ್ಝೀಮ್ ಮತ್ತು ಅಬ್ದುಲ್ ಜಬ್ಬಾರ್ (ಜೊತೆ ಕಾರ್ಯದರ್ಶಿಗಳು)
ನಿಯಾಝ್ ಅಹ್ಮದ್ (ಕೋಶಾಧಿಕಾರಿ)
ಅಬೂಬಕರ್ ಸಿದ್ದೀಕ್ (ಉಪ ಕೋಶಾಧಿಕಾರಿ)
ಅಹ್ಮದ್ ಝಾಕಿರ್ (ಸಂಚಾಲಕರು)
ನಝೀರ್ (ಸ್ಪೋರ್ಟ್ಸ್ ಕ್ಯಾಪ್ಟನ್)
ಅಬ್ದುಲ್ ಖಯ್ಯೂಮ್ (ಗೌರವ ಸಲಹೆಗಾರರು)
ಕಾರ್ಯಕಾರಿ ಸಮಿತಿ ಸದಸ್ಯರಾಗಿ ನವಾಝ್, ಅಬ್ದುಲ್ ಖಾದರ್ ಬಾವಾ, ಝಾಕಿರ್ ಹುಸೈನ್, ಅಬ್ದುರ್ರಹೀಮ್, ಯೂಸುಫ್, ಸೈಫುಲ್ಲಾಹ್, ರಿಝ್ವಾನ್  ಹಾಗೂ ಶಹಾಬುದ್ದೀನ್ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News