×
Ad

ಹಗಲು-ರಾತ್ರಿ ಟೆಸ್ಟ್ ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಮಹಿಳೆ ಸ್ಮೃತಿ ಮಂಧಾನ

Update: 2021-10-01 13:12 IST
photo: CricketAustralia

ಕ್ಯಾನ್ ಬೆರಾ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರು ಶುಕ್ರವಾರ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 127 ರನ್ ಗಳಿಸಿದರು. ಈ ಮೂಲಕ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ಇದು ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಮಹಿಳೆಯ ಮೊದಲ ಶತಕವಾಗಿದೆ

ಮೊದಲ ದಿನದಾಟದಂತ್ಯಕ್ಕೆ ಔಟಾಗದೆ 80 ರನ್ ಗಳಿಸಿದ್ದ ಮಂಧಾನ, ಕ್ವೀನ್ಸ್‌ಲ್ಯಾಂಡ್‌ನ ಕ್ಯಾರಾರಾದಲ್ಲಿ ಎರಡನೇ ದಿನದಾಟವಾದ ಶುಕ್ರವಾರ  ಮೂರು ಅಂಕಿಗಳ ಗಡಿಯನ್ನು ದಾಟಲು 171 ಎಸೆತಗಳನ್ನು ತೆಗೆದುಕೊಂಡರು ಹಾಗೂ  127 ರನ್ ಗಳಿಸಿ ಔಟಾದರು.

ಮಂಧಾನ 216 ಎಸೆತಗಳಲ್ಲಿ 27 ಬೌಂಡರಿ ಹಾಗೂ  ಒಂದು ಸಿಕ್ಸರ್ ಸಹಾಯದಿಂದ 127 ರನ್ ಗಳಿಸಿದರು ಹಾಗೂ  ಪೂನಂ ರಾವತ್ (36) ರೊಂದಿಗೆ ಎರಡನೇ ವಿಕೆಟ್ ಗೆ 102 ರನ್ ಸೇರಿಸಿ  ದಾಖಲೆಯನ್ನು ನಿರ್ಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News