×
Ad

ಬಾಕ್ಸರ್ ಲೆನ್ನಿ ಡಾ ಗಾಮಾ, ಫುಟ್ಬಾಲ್ ಆಟಗಾರ ಡೆನ್ಝಿಲ್ ಫ್ರಾಂಕೊ ಟಿಎಂಸಿ ಗೋವಾ ಘಟಕಕ್ಕೆ ಸೇರ್ಪಡೆ

Update: 2021-10-02 14:07 IST

ಪಣಜಿ: ಬಾಕ್ಸಿಂಗ್ ಚಾಂಪಿಯನ್ ಲೆನ್ನಿ ಡಾ ಗಾಮ  ಹಾಗೂ  ಮಾಜಿ ಭಾರತೀಯ ಫುಟ್ಬಾಲ್ ಡಿಫೆಂಡರ್ ಡೆನ್ಝಿಲ್ ಫ್ರಾಂಕೊ ಅವರು ಶನಿವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರ್ಪಡೆಗೊಂಡರು. ಇಬ್ಬರು ಕ್ರೀಡಾ ತಾರೆಯರು ಪಕ್ಷದ ಗೋವಾ ಘಟಕದ ಸದಸ್ಯರಾಗಿರುತ್ತಾರೆ.

ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಝಿನ್ಹೋ ಫಲೆರೊ ಕೋಲ್ಕತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರ್ಪಡೆಗೊಂಡ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ಬಂಗಾಳ ಮೂಲದ ಪಕ್ಷವು ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 40 ಸ್ಥಾನಗಳಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳದೆ ಸ್ವಂತವಾಗಿ ಸ್ಪರ್ಧಿಸಲು ಯೋಜಿಸಿದೆ ಎಂದು ಮಾಜಿ ಕಾಂಗ್ರೆಸ್ ಶಾಸಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News