ಉತ್ತರಾಖಂಡ, ಲಡಾಖ್‌ನಲ್ಲಿ ಚೀನಾದ ಆಕ್ರಮಣ: ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ತರಾಟೆ

Update: 2021-10-03 11:47 GMT

ಹೊಸದಿಲ್ಲಿ: ಲಡಾಖ್ ಹಾಗೂ  ಉತ್ತರಾಖಂಡದಲ್ಲಿ ಚೀನಾದ ಆಕ್ರಮಣಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

2014 ರ ಲೋಕಸಭಾ  ಚುನಾವಣಾ ಪ್ರಚಾರಗಳಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು  
ಹೇಳುತ್ತಿದ್ದ  '56 ಇಂಚಿನ ಎದೆಯ' ಹೇಳಿಕೆಯನ್ನು ಬಳಸಿಕೊಂಡು ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

"ಚೀನಾ ಪ್ಲಸ್ ,ಪಾಕಿಸ್ತಾನ ಪ್ಲಸ್, ಮಿಸ್ಟರ್ 56 ಇಂಚು ಎನ್ನುವುದು ಭಾರತದ ಪ್ರದೇಶವನ್ನು ಚೀನಾ ಅತಿಕ್ರಮಣ ಮಾಡುತ್ತಿರುವುದರ ಹೆಚ್ಚಳ " ಎಂದು ಅವರು ಲಡಾಖ್ ಹಾಗೂ ಉತ್ತರಾಖಂಡವನ್ನು ಉಲ್ಲೇಖಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಸುಮಾರು 100 ಸೈನಿಕರು ಆಗಸ್ಟ್ 30 ರಂದು ಉತ್ತರಾಖಂಡದ ಬಾರಹೋಟಿ ಸೆಕ್ಟರ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಉಲ್ಲಂಘಿಸಿದ್ದಾರೆ.

ಕೆಲವು ಗಂಟೆಗಳ ಕಾಲ ಕಳೆದ ನಂತರ ಚೀನಾದ ಸೈನಿಕರು ಈ ಪ್ರದೇಶದಿಂದ ಮರಳಿದರು ಎಂದು ವರದಿಯಾಗಿತ್ತು. ಚೀನಾದ ಉಲ್ಲಂಘನೆಯ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News