×
Ad

ಕೋಲ್ಕತಾ ಗೆಲುವಿಗೆ 116 ರನ್ ಗುರಿ ನೀಡಿದ ಸನ್ ರೈಸರ್ಸ್

Update: 2021-10-03 21:42 IST
photo: twitter.com/ESPNcricinfo

ದುಬೈ,ಅ.3: ಐಪಿಎಲ್ ಟೂರ್ನಿಯಲ್ಲಿ ರವಿವಾರ ನಡೆದ 49ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 116 ರನ್ ಸುಲಭ ಸವಾಲು ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ ಕೆಕೆಆರ್ ಬೌಲರ್ ಗಳ ಕರಾರುವಾಕ್ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 115 ರನ್ ಗಳಿಸಿತು.

ಹೈದರಾಬಾದ್ ಪರ ನಾಯಕ ಕೇನ್ ವಿಲಿಯಮ್ಸನ್(26,21 ಎಸೆತ)ಗರಿಷ್ಠ ಸ್ಕೋರ್ ಗಳಿಸಿದರು. ಅಬ್ದುಲ್ ಸಮದ್(25), ಪ್ರಿಯಂ ಗರ್ಗ್(21) ಹಾಗೂ  ಜೇಸನ್ ರಾಯ್(10)ಎರಡಂಕೆಯ ಸ್ಕೋರ್ ಗಳಿಸಿದರು. ಆರಂಭಿಕ ಬ್ಯಾಟ್ಸ್ ಮನ್ ವೃದ್ದಿಮಾನ್ ಸಹಾ ಖಾತೆ ತೆರೆಯಲು ವಿಫಲರಾದರು. ಹೈದರಾಬಾದ್ ಮೊದಲ ಓವರ್ ನ 2ನೇ  ಎಸೆತದಲ್ಲಿ ವಿಕೆಟ್ ಕಳೆದುಕೊಂಡು ಅತ್ಯಂತ ಕಳಪೆ ಆರಂಭ ಪಡೆದಿತ್ತು. ಇನಿಂಗ್ಸ್ ಅಂತ್ಯದ ತನಕ  ಕಳಪೆ ಆರಂಭದಿಂದ ಚೇತರಿಸಿಕೊಳ್ಳಲು ವಿಫಲವಾಯಿತು.

ಕೆಕೆಆರ್ ಪರವಾಗಿ ವರುಣ್ ಚಕ್ರವರ್ತಿ(2-26), ಟಿಮ್ ಸೌಥಿ(2-26) ಹಾಗೂ ಶಿವಂ ಮಾವಿ(2-29)ತಲಾ ಎರಡು ವಿಕೆಟ್ ಪಡೆದರು. ಶಾಕಿಬ್ ಅಲ್ ಹಸನ್ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News