2021ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೋಬೆಲ್‌ ಪ್ರಶಸ್ತಿ ಪ್ರಕಟ

Update: 2021-10-04 14:48 GMT

ನ್ಯೂಯಾರ್ಕ್:‌ ವೈದ್ಯಕೀಯ ಕ್ಷೇತ್ರದ ನೋಬೆಲ್‌ ಪ್ರಶಸ್ತಿ ಪ್ರಕಟಗೊಂಡಿದ್ದು, ಅಮೆರಿಕದ ಇಬ್ಬರು ವಿಜ್ಞಾನಿಗಳನ್ನು 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡೇವಿಡ್‌ ಜೂಲಿಯಸ್‌ ಹಾಗೂ ಆಡೆಮ್‌ ಪ್ಯಾಟಪೋಶಿಯನ್‌ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್‌ ಸ್ವೀಡಿಶ್‌ ಕ್ರೋನರ್‌ (1.1 ಮಿಲಿಯನ್‌ ಡಾಲರ್)‌ ನಗದು ಮೊತ್ತವನ್ನು ಒಳಗೊಂಡಿದೆ. 

ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡೇವಿಡ್ ಜೂಲಿಯಸ್ ಮತ್ತು ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ಸಂಶೋಧನೆಯ ಪ್ರಾಧ್ಯಾಪಕರಾದ ಆಡೆಮ್‌ ಪ್ಯಾಟಪೋಶಿಯನ್‌ ಈ ಪ್ರಶಸ್ತಿ ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ. 

"ಇವರಿಬ್ಬರು ನಡೆಸಿದ ಪ್ರಮುಖ ಸಂಶೋಧನೆಯು ನಮ್ಮ ನರಮಂಡಲವು ಬಿಸಿ, ತಂಪು ಮತ್ತು ಯಾಂತ್ರಿಕ ಪ್ರಚೋದನೆಗಳನ್ನು ಹೇಗೆ ಗ್ರಹಿಸುತ್ತದೆ ಎಂಬುವುದನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ ಎಂದು ನೋಬೆಲ್‌ ತನ್ನ ಅಧಿಕೃತ ಇನ್ಸ್ಟಾ ಗ್ರಾಮ್‌ ಖಾತೆಯಲ್ಲಿ ವಿಜೇತರನ್ನು ಪ್ರಕಟಿಸಿತು. ತಮ್ಮ ಮನೆಯಲ್ಲೇ ಕುಳಿತು ಇಬ್ಬರು ಪ್ರಶಸ್ತಿ ವಿಜೇತರು ಸಂಭ್ರಮಾಚರಿಸುತ್ತಿರುವ ಫೋಟೊಗಳನ್ನೂ ಮಾಧ್ಯಮಗಳು ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News