ವಿಶ್ವದಾದ್ಯಂತ ಫೇಸ್ಬುಕ್, ವಾಟ್ಸಪ್‌, ಇನ್ಸ್ಟಾಗ್ರಾಂ ಸರ್ವರ್‌ ತಾತ್ಕಾಲಿಕ ಸ್ಥಗಿತ

Update: 2021-10-04 17:48 GMT

ಹೊಸದಿಲ್ಲಿ: ಪ್ರಮುಖ ದಿನಬಳಕೆಯ ಸಾಮಾಜಿಕ ತಾಣಗಳಾದ ವಾಟ್ಸಪ್‌ ಮೆಸೆಂಜರ್‌, ಫೇಸ್‌ ಬುಕ್‌, ಇನ್ಸ್ಟಾ ಗ್ರಾಂ, ಫೇಸ್ಬುಕ್‌ ಮೆಸೆಂಜರ್‌ ಸೋಮವಾರ ರಾತ್ರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮಾಹಿತಿ ನೀಡಲು ಸಾಮಾಜಿಕ ತಾಣ ಬಳಕೆದಾರರು ಟ್ವಿಟರ್‌ ಅನ್ನು ಆಶ್ರಯಿಸಿದ್ದಾರೆ. 

ತಾತ್ಕಾಲಿಕವಾಗಿ ಸರ್ವರ್‌ ಸ್ಥಗಿತಗೊಂಡಿರುವ ಕುರಿತು ಫೇಸ್ಬುಕ್‌ ಸಂಸ್ಥೆಯು ಅಧಿಕೃತ ಮಾಹಿತಿ ನೀಡಿದ್ದು, ನಿಮ್ಮ ತಾಳ್ಮೆಗಾಗಿ ಧನ್ಯವಾದ. ಶೀಘ್ರವೇ ತೊಂದರೆಯನ್ನು ಸರಿಪಡಿಸಲಾಗುವುದು ಎಂದು ತನ್ನ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದೆ. ಈ ಹಿಂದೆಯೂ ಅನೇಕ ಬಾರಿ ತಾತ್ಕಾಲಿಕವಾಗಿ ಸರ್ವರ್‌ ಸ್ಥಗಿತಗೊಂಡು ಅಲ್ಪಸಮಯದಲ್ಲೇ ಮರುಸ್ಥಾಪನೆಗೊಳ್ಳುತ್ತಿತ್ತು. 

ಫೇಸ್‌ಬುಕ್, ವಾಟ್ಸ್‌ಆಪ್, ಇನ್‌ಸ್ಟಾಗ್ರಾಂ ಸೋಮವಾರ ರಾತ್ರಿ 9:00 ಗಂಟೆಯ ಆಸುಪಾಸಿನಲ್ಲಿ ಸಂಪರ್ಕಕ್ಕೆ ಸಿಗುತ್ತಿಲ್ಲವೆಂಬ ಸಂದೇಶಗಳನ್ನು ಬಳಕೆದಾರರು ಟ್ವಿಟ್ಟರ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂರು ಜಾಲತಾಣಗಳು ಫೇಸ್‌ಬುಕ್ ಒಡೆತನಕ್ಕೆ ಸೇರಿದ್ದಾಗಿದ್ದು, ತ್ವರಿತ ಸಂದೇಶರವಾನೆ, ಫೋಟೋ ಶೇರಿಂಗ್ ಹಾಗೂ ಸೋಶಿಯಲ್ ನೆಟ್‌ವರ್ಕಿಂಗ್‌ಗಾಗಿ ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News