×
Ad

ಛತ್ತೀಸ್ ಗಡ ಸಿಎಂ ಬಘೇಲ್ ರನ್ನು ಲಕ್ನೊ ವಿಮಾನನಿಲ್ದಾಣದಲ್ಲಿ ತಡೆದ ಪೊಲೀಸರು

Update: 2021-10-05 14:57 IST
photo: twitter

ಲಕ್ನೊ: ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಯಲ್ಲಿ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆಯೇ ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ರಾಜ್ಯ ಪೊಲೀಸರು ಮಂಗಳವಾರ ತಡೆದಿದ್ದಾರೆ.

ಭೂಪೇಶ್ ಬಘೇಲ್ ಅವರು ಪೊಲೀಸರ ಕ್ರಮ ವಿರೋಧಿಸಿ ಲಕ್ನೋ ವಿಮಾನ ನಿಲ್ದಾಣದ ಹೊರಗೆ ನೆಲದ ಮೇಲೆ ಕುಳಿತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ನಿನ್ನೆ ಸೀತಾಪುರದಲ್ಲಿ ಪೊಲೀಸ್ ವಶದಲ್ಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಲು ನಾನು ಬಯಸಿದ್ದೆ ಎಂದು ಬಘೇಲ್ ಹೇಳಿದರು.

"ಯಾವುದೇ ಆದೇಶವಿಲ್ಲದೆ, ನನ್ನನ್ನು ಲಕ್ನೋ ವಿಮಾನ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದೆ" ಎಂದು ಟ್ವೀಟ್ ನಲ್ಲಿ, 60 ವರ್ಷದ ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ಮುಖಂಡರು ಸುಮಾರು ಒಂದು ನಿಮಿಷದ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವುದನ್ನು ತೋರಿಸುತ್ತದೆ. "ಲಖಿಂಪುರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ನಾನು ಲಖಿಂಪುರಕ್ಕೆ ಹೋಗುತ್ತಿಲ್ಲ. ಹೀಗಾಗಿ ನಿಮ್ಮ ಸಮಸ್ಯೆ ಏನು? ನನ್ನನ್ನು ಏಕೆ ತಡೆದಿದ್ದೀರಿ’’ ಎಂದು ಬಘೇಲ್ ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಲಕ್ನೋದಲ್ಲಿ ದೊಡ್ಡ ಕೂಟಗಳನ್ನು ಸಹ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News