×
Ad

ಮುಂಬೈ ಇಂಡಿಯನ್ಸ್ ದಾಳಿಗೆ ದಿಕ್ಕಾಪಾಲಾದ ರಾಜಸ್ಥಾನ ರಾಯಲ್ಸ್

Update: 2021-10-05 21:44 IST
ಜೇಮ್ಸ್ ನೀಶಾಮ್, photo: twitter 

ಶಾರ್ಜಾ: ಮುಂಬೈ ಇಂಡಿಯನ್ಸ್ ವೇಗದ ಬೌಲರ್ ನಥಾನ್ ಕೌಲ್ಟರ್ ನೀಲ್ (4-14)ಬೌಲಿಂಗ್ ದಾಳಿಗೆ ದಿಕ್ಕಾಪಾಲಾದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಟೂರ್ನಿಯ 51ನೇ ಪಂದ್ಯದಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 90 ರನ್ ಗಳಿಸಿದೆ.

ಟಾಸ್ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನದ ಪರವಾಗಿ ಆರಂಭಿಕ ಬ್ಯಾಟ್ಸ್ ಮನ್ ಎವಿನ್ ಲೂವಿಸ್ 24 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. 20 ಓವರ್ ಗಳಲ್ಲಿ ಡೇವಿಡ್ ಮಿಲ್ಲರ್ 15, ಯಶಸ್ವಿ ಜೈಸ್ವಾಲ್ 12, ರಾಹುಲ್ ಟೆವಾಟಿಯ 12 ರನ್ ಗಳಿಸಿದರು.

ಮುಂಬೈ ಪರ ಕೌಲ್ಟರ್ ನೀಲ್ ಯಶಸ್ವಿ ಬೌಲರ್ ಎನಿಸಿಕೊಂಡರು. ಜೇಮ್ಸ್ ನೀಶಾಮ್(3-12) ಹಾಗೂ ಬುಮ್ರಾ (2-14)5 ವಿಕೆಟ್ ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News