ನವಿ ಮುಂಬೈ ಬಂದರಿನಿಂದ 125 ಕೋ.ರೂ. ಮೌಲ್ಯದ ಹೆರಾಯಿನ್ ವಶ

Update: 2021-10-08 14:18 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ. 8: ನವಿ ಮುಂಬೈಯ ನ್ಹಾವಾ ಶೇವಾ ಬಂದರಿನಿಂದ 125 ಕೋಟಿ ರೂಪಾಯಿ ಮೌಲ್ಯದ 25 ಕಿ.ಗ್ರಾಂ. ಹೆರಾಯಿನ್ ಅನ್ನು ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ (ಡಿಆರ್ಐ)ದ ಮುಂಬೈ ವಲಯ ಘಟಕ ವಶಪಡಿಸಿಕೊಂಡಿದೆ.

ಈ ಹೆರಾಯಿನ್ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸಾಗಾಟದ ಭಾಗವಾಗಿದೆ. ಈ ಹೆರಾಯಿನ್ ಅನ್ನು ನೆಲೆಗಡಲೆ ಎಣ್ಣೆಯ ಪೆಟ್ಟಿಗೆಯಲ್ಲಿ ಇರಿಸಿ ಕಂಟೈನರ್ ಮೂಲಕ ಇರಾನ್ನಿಂದ ಇಂಡಿಯಾಕ್ಕೆ ಸಾಗಾಟ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. 

ಮಸೀದಿ ಬಂದರು ಪ್ರದೇಶದ ಸಂದೀಪ್ ಥಕ್ಕರ್ ಎಂಬ ಸಣ್ಣ ಉದ್ಯಮಿ ಈ ಆಮದು ಮಾಡಿದ್ದಾರೆ ಎಂದು ಡಿಆರ್ಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಥಕ್ಕರ್ ಅವರನ್ನು ವಿಚಾರಣೆಗೊಳಪಡಿಸಿದಾಗ, ‘‘ ತಾನು ತನ್ನ ಸಂಸ್ಥೆಯ ರಫ್ತು-ಆಮದು ಕೋಡ್ ಅನ್ನು ಮುಂಬೈಯ ಉದ್ಯಮಿ ಜಯೇಶ್ ಸಂಘ್ವಿಗೆ ನೀಡಿದ್ದೇನೆ. ಇರಾನ್ನಿಂದ ಪ್ರತಿ ಆಮದಿಗೆ ಅವರು ತನಗೆ 10 ಸಾವಿರ ರಿಯಲ್ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತಾನು ಜಯೇಶ್ ಸಂಘ್ವಿ ಜೊತೆ ಕಳೆದ ಒಂದು ದಶಕಗಳಿಂದ ವ್ಯವಹಾರ ನಡೆಸುತ್ತಿದ್ದೇನೆ. ಆದುದರಿಂದ ತಾನು ಆತನನ್ನು ನಂಬಿದೆ. ಕಂಟೈನರ್ನಲ್ಲಿ ಮಾದಕ ಪದಾರ್ಥದ ಇದೆ ಎಂದು ನಾನು ಭಾವಿಸಿರಲಿಲ್ಲ ಎಂದು ಥಕ್ಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News