ಹುಲಿಯನ್ನು ತಕ್ಷಣ ಕೊಲ್ಲಬೇಡಿ: ಮದ್ರಾಸ್ ಹೈಕೋರ್ಟ್

Update: 2021-10-08 16:32 GMT

ಚೆನ್ನೈ,ಅ.5: ಹುಲಿಯನ್ನು ತಕ್ಷಣ ಕೊಲ್ಲದಂತೆ ನರಭಕ್ಷಕ ಹುಲಿಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿರುವ ತಮಿಳುನಾಡು ಅರಣ್ಯ ಇಲಾಖೆಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಮಂಗಳವಾರ ಸೂಚಿಸಿದೆ. ಹುಲಿಯನ್ನು ತಕ್ಷಣ ಕೊಲ್ಲಬೇಡಿ. ನೀವು ಪತ್ತೆ ಹಚ್ಚಿರಬಹುದಾದ ಹುಲಿ ನರಭಕ್ಷಕವಲ್ಲದಿರಬಹುದು ಎಂದು ನ್ಯಾಯಾಲಯವು ಇಲಾಖೆಗೆ ತಿಳಿಸಿತು. ಮದುಮಲೈ ಅರಣ್ಯದ ಟಿ 23 ಎಂದು ಹೆಸರಿಸಲಾಗಿರುವ ಹುಲಿಯನ್ನು ಹಿಡಿಯಲು ಇಲಾಖೆ ವ್ಯಾಪಕ ಪ್ರಯತ್ನಗಳನ್ನು ನಡೆಸುತ್ತಿದೆ. ಹುಲಿಯನ್ನು ಬೇಟೆಯಾಡಲು ತಮಿಳುನಾಡು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಮುಖ್ಯ ನ್ಯಾಯಾಧೀಶ ಸಂಜಿಬ್ ಮಿಶ್ರಾ ಅವರು,ದೇಶದಲ್ಲಿ ಕೆಲವೇ ಹುಲಿಗಳು ಉಳಿದುಕೊಂಡಿವೆ ಎಂದು ಹೇಳಿದರು.

ತಾವು ಹುಲಿಯನ್ನು ಕೊಲ್ಲುವ ಉದ್ದೇಶವನ್ನು ಹೊಂದಿಲ್ಲ, ಅದನ್ನು ಸಜೀವವಾಗಿ ಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News