ಲಖಿಂಪುರ ಹಿಂಸಾಚಾರ:ಸಿಬಿಐ ತನಿಖೆಗೆ ಕೋರಿ ಉ.ಪ್ರ.ವಕೀಲರಿಂದ ಸಿಜೆಐಗೆ ಪತ್ರ
Update: 2021-10-08 22:05 IST
ಲಕ್ನೋ,ಅ.5: ಲಖಿಂಪುರ ಹಿಂಸಾಚಾರದ ಕುರಿತು ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಡಿ ಸಿಬಿಐನಿಂದ ತನಿಖೆಯನ್ನು ನಡೆಸುವಂತೆ ಕೋರಿ ಉ.ಪ್ರದೇಶದ ವಕೀಲರು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರಿಗೆ ಪತ್ರವನ್ನು ಬರೆದಿದ್ದಾರೆ. ಎಫ್ಐಆರ್ ಸಲ್ಲಿಕೆಯನ್ನು ಮತ್ತು ರವಿವಾರದ ಘಟನೆಯಲ್ಲಿ ಭಾಗಿಯಾಗಿದ್ದ ಸಚಿವರಿಗೆ ದಂಡನೆಯನ್ನು ಖಚಿತಪಡಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶ ನೀಡುವಂತೆಯೂ ವಕೀಲರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.