'ಕ್ರಿಯೆಗೆ ತಕ್ಕ ಪ್ರತಿಕ್ರಿಯೆ':ಲಖಿಂಪುರದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಕುರಿತು ರಾಕೇಶ್ ಟಿಕಾಯತ್ ಪ್ರತಿಕ್ರಿಯೆ
ಹೊಸದಿಲ್ಲಿ: ಲಖಿಂಪುರ ಖೇರಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆ ಘಟನೆಯು ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ'. ಅದನ್ನು ನಾವು ತಪ್ಪೆಂದು ಕರೆಯುವುದಿಲ್ಲ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಶನಿವಾರ ಹೇಳಿದರು.
"ಲಖಿಂಪುರ ಖೇರಿಯಲ್ಲಿ ಸಚಿವರೊಬ್ಬರ ಬೆಂಗಾವಲು ಕಾರುಗಳು ನಾಲ್ವರು ರೈತರ ಮೇಲೆ ಹರಿದ ಬಳಿಕ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿರುವುದು ಒಂದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಾಗಿದೆ. ಹತ್ಯೆಯಲ್ಲಿ ಭಾಗಿಯಾದವರನ್ನು ತಪ್ಪಿತಸ್ಥರೆಂದು ನಾನು ಪರಿಗಣಿಸುವುದಿಲ್ಲ’’ ಎಂದು ಇತರ ರೈತ ಸಂಘದ ನಾಯಕರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಟಿಕಾಯತ್ ಹೇಳಿದ್ದಾರೆ.
"ಅದು ಬಿಜೆಪಿ ಕಾರ್ಯಕರ್ತರದ್ದೇ ಆಗಿರಲಿ, ರೈತರದ್ದೇ ಆಗಿರಲಿ. ಜೀವಹಾನಿಯಾಗಿರುವುದಕ್ಕೆನಮಗೆ ಬೇಸರವಾಗಿದೆ. ಅದೊಂದು ದುರದೃಷ್ಟಕರ ಘಟನೆ. ನ್ಯಾಯ ದೊರೆಯುವ ಭರವಸೆಯಲ್ಲಿ ನಾವಿದ್ಧೇವೆ'' ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
"ಲಖಿಂಪುರ ಹತ್ಯಾಕಾಂಡದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು" ಎಂದು ಗುರುವಾರ ಟಿಕಾಯತ್ ಒತ್ತಾಯಿಸಿದ್ದರು.