ಸತತ ಆರನೇ ದಿನವೂ ಇಂಧನ ಬೆಲೆ ಏರಿಕೆ
Update: 2021-10-10 12:42 IST
ಹೊಸದಿಲ್ಲಿ,ಅ.10: ಸತತ ಆರನೇ ದಿನವಾದ ರವಿವಾರವೂ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದ್ದು,ಪೆಟ್ರೋಲ್ ಬೆಲೆ ಹೊಸ ಸಾರ್ವಕಾಲಿಕ ಎತ್ತರವನ್ನು ತಲುಪಿದೆ. ದಿಲ್ಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಅನುಕ್ರಮವಾಗಿ 30 ಪೈಸೆ ಮತ್ತು 35 ಪೈಸೆ ಹೆಚ್ಚಿಸಲಾಗಿದ್ದು,ಪ್ರತಿ ಲೀ.ಗೆ 104.14 ರೂ. ಮತ್ತು 92.82 ರೂ.ಆಗಿವೆ. ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಅನುಕ್ರಮವಾಗಿ 29 ಪೈಸೆ ಮತ್ತು 37 ಪೈಸೆ ಹೆಚ್ಚಿಸಲಾಗಿದ್ದು,ಪ್ರತಿ ಲೀ.ಗೆ 110.12 ರೂ. ಮತ್ತು 100.66 ರೂ.ಆಗಿವೆ. ದೇಶದ ನಾಲ್ಕು ಮಹಾನಗರಗಳ ಪೈಕಿ ಇಂಧನ ಬೆಲೆಗಳು ಮುಂಬೈನಲ್ಲಿ ಅತ್ಯಂತ ದುಬಾರಿಯಾಗಿವೆ. ವ್ಯಾಟ್‌ನಿಂದಾಗಿ ಇಂಧನ ಬೆಲೆಗಳು ರಾಜ್ಯಗಳಲ್ಲಿ ಭಿನ್ನವಾಗಿರುತ್ತವೆ.